ಲೈಫ್ & ಸ್ಟೈಲ್

ಸೋರಿಯಾಸಿಸ್ ನಿಂದ ಮುಕ್ತಿಹೊಂದಲು ಕೊಲಂಬಿಯಾ ಏಷಿಯಾ ಆಸ್ಪತ್ರೆ ಸೌಂದರ್ಯ ತಜ್ಞ ರವಿ. ಎಸ್‍ ಅವರಿಂದ ಸಲಹೆ

ನಮ್ಮ ಚರ್ಮ ದೇಹದ ಅತ್ಯಂತ ಸೂಕ್ಷ್ಮ ಮತ್ತು ತೆರೆದುಕೊಳ್ಳುವ ಅಂಗ. ಇದು ಎಲ್ಲರ ಗಮನಸೆಳೆಯುವುದು ಮಾತ್ರವಲ್ಲದೆ ಗ್ರಹಿಕೆಗೆ ಬರುವ ಅನೇಕ ಸೋಂಕುಗಳಿಗೆ ತುತ್ತಾಗುತ್ತದೆ. ಅದರಲ್ಲೂ ವಿಶೇಷವಾಗಿ ಕಠಿಣ ಹವಾಮಾನ ಬದಲಾವಣೆಯ ಮತ್ತು ಜೈವಿಕವಲ್ಲದ ಆಹಾರವನ್ನು ಸೇವಿಸುವ ಈ ಕಾಲದಲ್ಲಿ. ಇಂಟರ್ನೆಟ್‍ ಯುಗದಲ್ಲಿ ಯಾವ ರೋಗ ಬಂದರೂ ಅನೇಕ ತಪ್ಪು ಕಲ್ಪನೆಗಳು ಬಂದುಬಿಡುತ್ತವೆ. ಸೂಕ್ಷ್ಮ ಅಂಗವಾಗಿರುವುದರಿಂದ, ಚರ್ಮದ ಮೇಲೆ ಏನೇ ಹಚ್ಚಿದರೂ ಅಥವಾ ಸರಿಯಾದ ತಿಳುವಳಿಕೆಯಿಲ್ಲದೆ ಯಾವುದೇ ಔಷಧ ತೆಗೆದುಕೊಂಡರೂ ಲಾಭಕ್ಕಿಂತ ಅಪಾಯವೇ ಹೆಚ್ಚು. ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದ ಚರ್ಮದ ಅಂತಹ ಒಂದು ಕಾಯಿಲೆಯೆಂದರೆ ಸೋರಿಯಾಸಿಸ್‍, ಚರ್ಮದ ಭಾಗಗಳನ್ನು ದಪ್ಪಗೆ, ಉರಿಯುವಂತೆ, ಕೆಂಪು ಚರ್ಮ, ಮತ್ತು ಬೆಳ್ಳಿ ಬಣ್ಣದ ಪೊರೆಯನ್ನು ಉಂಟುಮಾಡುವ ಒಂದು ದೀರ್ಘಕಾಲಿಕ ಚರ್ಮದ ತೊಂದರೆ. ಮಕ್ಕಳು ಮತ್ತು ಹದಿಹರೆಯದವರಲ್ಲಿ ಸೋರಿಯಾಸಿಸ್ ಕಾಣಿಸಿಕೊಳ್ಳಬಹುದು, ಮುಖ್ಯವಾಗಿ ಲಿಂಗ ಭೇದ ವಿಲ್ಲದೇ ವಯಸ್ಕರಲ್ಲಿ ಇದು ಉಂಟಾಗುತ್ತದೆ. ಆದರೆ, ಸೋರಿಯಾಸಿಸ್ ಒಂದು ಸೋಂಕು ಅಲ್ಲ ಮತ್ತು ಇದು ಸಾಂಕ್ರಾಮಿಕವಲ್ಲ.

ಈ ರೋಗವು ರೋಗನಿರೋಧಕ, ಆನುವಂಶಿಕ, ಮತ್ತು ಪರಿಸರಾತ್ಮಕ ಅಂಶಗಳ ಸಂಯೋಜನೆಯಿಂದಾಗಿ ಉಂಟಾಗುತ್ತದೆ. ಸೋರಿಯಾಸಿಸ್ ನ ತೀವ್ರತೆ ದೇಹದ ಮೇಲ್ಮೈಯ ಮೇಲೆ ಎಷ್ಟು ಪರಿಣಾಮ ಬೀರಿದೆ ಮತ್ತು ಅದು ವ್ಯಕ್ತಿಯ ಜೀವನ ಗುಣಮಟ್ಟದ ಮೇಲೆ ಎಷ್ಟು ಪ್ರಭಾವ ಬೀರಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ಸೋರಿಯಾಸಿಸ್ ನ ಲಕ್ಷಣಗಳು ಇವುಗಳನ್ನು ಒಳಗೊಂಡಿರುತ್ತವೆ                                                                                        ಸಾಮಾನ್ಯವಾಗಿ ಬೆಳ್ಳಿ-ಬಿಳಿ ಪೊರೆಯಿಂದ ಮುಚ್ಚಲ್ಪಟ್ಟ ಚರ್ಮದ ಶುಷ್ಕ ಅಥವಾ ಕೆಂಪು ಪ್ರದೇಶಗಳು, ಮತ್ತು ಕೆಲವೊಮ್ಮೆ  ದಪ್ಪನೆಯ ಅಂಚುಗಳು.

ನೆತ್ತಿ, ಜನನಾಂಗಗಳು, ಅಥವಾ ಚರ್ಮದ ಮಡಿಕೆಗಳಲ್ಲಿ ಸಣ್ಣ ಕಜ್ಜಿಗಳು.

ತುರಿಕೆ ಮತ್ತು ಚರ್ಮದ ನೋವು

ಕೀಲು ನೋವು, ಊತ, ಅಥವಾ  ಬಿಗಿಯಾಗುವಿಕೆ. ಒಣಗಿದ, ಬಣ್ಣ ಕುಂದಿದ ಮುಂತಾದ ಉಗುರುಗಳ ಅಸಹಜತೆಗಳು, ಅಥವಾ ತುಂಡಾದ ಉಗುರುಗಳು.

ಸೋರಿಯಾಸಿಸ್ ಗೆ ಕಾರಣವಾಗುವ ಅಂಶಗಳು  

ಸೋರಿಯಾಸಿಸ್ ಉಂಟಾದಾಗ ಚರ್ಮದಲ್ಲಾಗುವ ಬದಲಾವಣೆಯಲ್ಲಿ ದೇಹದ ರೋಗನಿರೋಧಕ ವ್ಯವಸ್ಥೆ ನಿರ್ಣಾಯಕ ಪಾತ್ರವಹಿಸುತ್ತದೆ.  ಸೋರಿಯಾಸಿಸ್ ನಿಂದ ಹಾನಿಗೊಳಗಾದ ಚರ್ಮದಲ್ಲಿ, ಪ್ರತಿರಕ್ಷಣಾ ಕೋಶಗಳು ಚರ್ಮದ ರಕ್ತನಾಳಗಳನ್ನು ಪ್ರವೇಶಿಸುತ್ತವೆ ಮತ್ತು ಹೊರಚರ್ಮ ವೇಗವಾಗಿ ಬೆಳೆಯುವಂತೆ ಮಾಡುತ್ತವೆ ಮತ್ತು ಹರಡುವುದನ್ನು ಸರಿಯಾಗಿ ನಿಲ್ಲಿಸುತ್ತವೆ. ಇದರಿಂದಾಗಿ ಚರ್ಮ ದಪ್ಪಗಾಗುತ್ತದೆ, ಸತ್ತ ಚರ್ಮದ ಕೋಶಗಳಿಂದ ಪೊರೆ ಉಂಟಾಗುತ್ತದೆ, ಮತ್ತು ಇದು ಕೆಂಪು ಬಣ್ಣಕ್ಕೆ ತಿರುಗುತ್ತದೆ.

ಸೋರಿಯಾಸಿಸ್ ಅಥವಾ ಸೋರಿಯಾಟಿಕ್ ಸಂಧಿವಾತ ಇರುವ ಸುಮಾರು ಶೇಕಡಾ 40 ರಷ್ಟು ಜನರಲ್ಲಿ ಅವರ ಕುಟುಂಬದ ಸದಸ್ಯರು ಇದೇ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಜನರನ್ನು ಸೋರಿಯಾಸಿಸ್ ಗೆ ಒಳಪಡುವಂತೆ ಮಾಡುವ ಅನೇಕ ವಂಶವಾಹಿಗಳನ್ನು ಗುರುತಿಸಲಾಗಿದೆ, ಆದರೆ ಇವುಗಳಲ್ಲಿ ಇನ್ನೂ ಯಾವುದೇ ಖಚಿತವಾದ ಆನುವಂಶಿಕ ಪರೀಕ್ಷೆಗಳನ್ನು ನಡೆಸಲಾಗಿಲ್ಲ.

ಬ್ಯಾಕ್ಟೀರಿಯಾ ಅಥವಾ ವೈರಸ್ ನಿಂದಾಗುವ ಸೋಂಕುಗಳು, ಮದ್ಯ ಸೇವನೆ ಮತ್ತು ಕೆಲವೊಂದು ಔಷಧಗಳು (ಬೀಟಾ  ಬ್ಲಾಕರ್‍ ಗಳು, ಲೀಥಿಯಂ, ಮತ್ತು ಮಲೇರಿಯಾ ನಿರೋಧಕ ಔಷಧಗಳೂ ಸೇರಿದಂತೆ) ವ್ಯಕ್ತಿಯಲ್ಲಿ ಸೋರಿಯಾಸಿಸ್ ಬೆಳೆಯುವಂತೆ ಮಾಡುವ ಅಪಾಯವಿದೆ ಅಥವಾ ಅವು ಅದರ ಗುಣಲಕ್ಷಣಗಳನ್ನು  ಉಲ್ಬಣಗೊಳಿಸಬಹುದು. ಧೂಮಪಾನ ಅಪಾಯವನ್ನು ಮತ್ತು ಸೋರಿಯಾಸಿಸ್ನಗ ತೀವ್ರತೆಯನ್ನು ಹೆಚ್ಚಿಸಬಹುದು, ಅದರಲ್ಲೂ ನಿರ್ದಿಷ್ಟವಾಗಿ ಅಂಗೈ ಮತ್ತು ಅಡಿಭಾಗದ ಸಮಸ್ಯೆಯನ್ನು ತೀವ್ರಗೊಳಿಸಬಹುದು.

ಸೋರಿಯಾಸಿಸ್ ನ ವಿಧಗಳು                                                                                  

ಪ್ಲೇಕ್ ಸೋರಿಯಾಸಿಸ್

ಇದೊಂದು ಅತ್ಯಂತ ಸಾಮಾನ್ಯ ಸೋರಿಯಾಸಿಸ್ ನ ವಿಧ ಮತ್ತು ಒಣ, ಉಬ್ಬಿದ, ಬೆಳ್ಳಿ ಬಣ್ಣದ ಪೊರೆಯಿಂದ ಕೂಡಿರುವ ಚರ್ಮದ ಕೆಂಪು ಗಾಯಗಳಿಗೆ (ಪ್ಲೇಕ್ಸ್) ಕಾರಣವಾಗುತ್ತದೆ. ಪ್ಲೇಕ್ಗಬಳು ತುರಿಕೆ ಅಥವಾ ನೋವು ಉಂಟುಮಾಡಬಹುದು ಮತ್ತು ಇವುಗಳು ಕೆಲವು ಅಥವಾ ದೊಡ್ಡ ಸಂಖ್ಯೆಯಲ್ಲಿರಬಹುದು.

ಉಗುರಿನ ಸೋರಿಯಾಸಿಸ್

ಇದು ಕೈ ಮತ್ತು ಕಾಲಿನ ಉಗುರುಗಳನ್ನು ಬಾಧಿಸಬಹುದು, ಒಣಗಿದ, ಅಸಹಜ ಉಗುರಿನ ಬೆಳವಣಿಗೆ ಮತ್ತು ಬಣ್ಣ ಕುಂದಿದ ಉಗುರಿಗೆ ಕಾರಣವಾಗಬಹುದು.

ಗುಟ್ಟೇಟ್‍ ಸೋರಿಯಾಸಿಸ್

ಹೆಚ್ಚಾಗಿ ಮಕ್ಕಳಲ್ಲಿ ಮತ್ತು ಹದಿಹರೆಯದವರಲ್ಲಿ ಕಂಡುಬರುವ ಗುಟ್ಟೇಟ್ ಸೋರಿಯಾಸಿಸ್ ಸಾಮಾನ್ಯವಾಗಿ ಸ್ಟ್ರೆಪ್ ಥ್ರೋಟ್ ನಂತಹ ಬ್ಯಾಕ್ಟೀರಿಯಾ ಸೋಂಕಿಗೆ ಕಾರಣವಾಗುತ್ತದೆ. ಮತ್ತು ಇದು ಸಣ್ಣ, ನೀರಿನ ಗುಳ್ಳೆ ಆಕಾರದ, ಪೊರೆ ಗಾಯಗಳನ್ನು ನಿಮ್ಮ  ಮುಂಡ, ಕೈ, ಕಾಲುಗಳು ಮತ್ತು ನೆತ್ತಿಯಲ್ಲಿ ಉಂಟುಮಾಡುತ್ತದೆ.

ವಿಲೋಮ ಸೋರಿಯಾಸಿಸ್

ಇದು ಮುಖ್ಯವಾಗಿ ಕಂಕುಳ, ತೊಡೆ ಸಂಧು, ಸ್ತನದ ಕೆಳಭಾಗದಲ್ಲಿ, ಮತ್ತು ಜನನಾಂಗದ ಸುತ್ತಲಿನ ಚರ್ಮವನ್ನು ಬಾಧಿಸುತ್ತದೆ.

ಪಸ್ಟುಲರ್ ಸೋರಿಯಾಸಿಸ್

ಇದು ಸಾಮಾನ್ಯವಲ್ಲದಿದ್ದರೂ   ಈ ರೀತಿಯ ಸೋರಿಯಾಸಿಸ್ ಕೈ, ಕಾಲು ಅಥವಾ ಬೆರಳ ತುದಿಯ ಸಣ್ಣ ಭಾಗಗಳಲ್ಲಿ ಅಥವಾ ಅಗಲವಾದ  ಜಾಗದಲ್ಲಿ ಕಾಣಿಸಿಕೊಳ್ಳಬಹುದು. ಪಸ್ಟುಲರ್ ಸೋರಿಯಾಸಿಸ್, ಚರ್ಮ ಕೆಂಪು ಮತ್ತು ಮೃದುವಾದ ಕೆಲವೇ ಗಂಟೆಗಳಲ್ಲಿ ವೇಗವಾಗಿ ಕೀವು ತುಂಬಿದ ಗುಳ್ಳೆಗಳಿಗೆ ಕಾರಣವಾಗುತ್ತದೆ. ಜ್ವರ, ಚಳಿ, ಅತಿಯಾದ ತುರಿಕೆ ಮತ್ತು ಭೇದಿ ಸಾಮಾನ್ಯವಾದ ಪಟ್ಸುಲರ್ ಸೋರಿಯಾಸಿಸ್ ನಲ್ಲಿ ಉಂಟಾಗಬಹುದು.

ಎರಿಥ್ರೋಡರ್ಮಿಕ್ ಸೋರಿಯಾಸಿಸ್

-ಅತ್ಯಂತ ಅಪರೂಪವಾಗಿ ಕಾಣಿಸಿಕೊಳ್ಳುವ ಈ ಸೋರಿಯಾಸಿಸ್ ನಿಂದ  ನಿಮ್ಮ ದೇಹ ಕೆಂಪಾಗಬಹುದು, ಎದ್ದು ಬರುವ ಸಣ್ಣ ಕಜ್ಜಿ ತುರಿಕೆ ಅಥವಾ ತೀವ್ರ ಉರಿಯನ್ನು ಉಂಟುಮಾಡಬಹುದು.

ಸೋರಿಯಾಟಿಕ್ ಸಂಧಿವಾತ

ಉರಿ, ಪೊರೆಯುಕ್ತ ಚರ್ಮದೊಂದಿಗೆ, ಸೋರಿಯಾಟಿಕ್ ಸಂಧಿವಾತದಲ್ಲಿ ಸಾಮಾನ್ಯವಾಗಿರುವ ಊದಿಕೊಂಡ ನೋವಿರುವ ಕೀಲುಗಳಿಗೆ ಕಾರಣವಾಗಬಹುದು. ಈ ಕಾಯಿಲೆ ಉಳಿದ ಸಂಧಿವಾತದ ವಿಧಗಳಿಗಿಂತ ದುರ್ಬಲವಾಗಿ ಕಾಣುವುದಿಲ್ಲ, ಗಂಭೀರ ಪ್ರಕರಣಗಳಲ್ಲಿ ಇದು ಬಿಗಿಯಾಗುವಿಕೆ ಮತ್ತು ಹೆಚ್ಚುತ್ತಿರುವ ಕೀಲು ಹಾನಿಗೆ ಕಾರಣವಾಗಬಹುದು, ಶಾಶ್ವತ ವಿರೂಪತೆ ಉಂಟುಮಾಡಬಹುದು.

ಸೋರಿಯಾಸಿಸ್ ನ ಅಡ್ಡ ಪರಿಣಾಮಗಳು

ಚರ್ಮ ತೆಳುವಾಗುವುದು ಮತ್ತು ಗಾಯದ ಕಲೆಗಳು (ನಿರ್ದಿಷ್ಟವಾಗಿ ಸಾಮಾನ್ಯ ಚರ್ಮಕ್ಕೆ ಅನ್ವಯಿಸಿದಾಗ), ಸೋರಿಯಾಸಿಸ್ ನಿಂದ ಬಳಲಿದ ವ್ಯಕ್ತಿಯು ಅನುಭವಿಸಬಹುದಾದ ಪ್ರಮುಖ ಅಡ್ಡ ಪರಿಣಾಮಗಳು. ಟಾಪಿಕಲ್ ಕಾರ್ಟಿಕೊಸ್ಟೆರಾಯ್ಡ್‍ ಗಳನ್ನು ದೀರ್ಘಕಾಲದವರೆಗೆ ಬಳಸಿದಾಗ ಈ ಪರಿಣಾಮಗಳಾಗುವ ಸಾಧ್ಯತೆ ಹೆಚ್ಚು. ಈ ಅಪಾಯವನ್ನು ಕಡಿಮೆ ಮಾಡಲು ಔಷಧಗಳನ್ನು ಸೂಕ್ತವಾಗಿ ಬಳಸಬೇಕು ಮತ್ತು ಅರ್ಹ ಚರ್ಮರೋಗ ತಜ್ಞರ ಪ್ರಿಸ್ಕ್ರಿಪ್ಷನ್ ಪಾಲಿಸಬೇಕು.

ಸೋರಿಯಾಸಿಸ್ ಪತ್ತೆ                                                                                               

ಅರ್ಹ ಚರ್ಮರೋಗ ತಜ್ಞರಿಂದ ಚರ್ಮದ ಪರೀಕ್ಷೆಯ ಮೂಲಕ ಸೋರಿಯಾಸಿಸ್‍ ಅನ್ನು ಪತ್ತೆಮಾಡಬಹುದು. ಕೆಲವು ಸಂದರ್ಭಗಳಲ್ಲಿ ಇತರ ಸಮಸ್ಯೆಗಳ ಸಾಧ್ಯತೆಗಳನ್ನು ಅಲ್ಲಗಳೆಯಲು ಚರ್ಮದ ಬಯಾಪ್ಸಿ ಅಥವಾ ಸ್ಕ್ರ್ಯಾಪಿಂಗ್ ಅನ್ನು ಮಾಡಿಸಿಕೊಳ್ಳಬಹುದು. ಇಲ್ಲಿಯವರೆಗೆ ಸೋರಿಯಾಸಿಸ್  ಪತ್ತೆಮಾಡುವಂತಹ ಯಾವುದೇ ರಕ್ತ ಪರೀಕ್ಷೆಯಿಲ್ಲ.

ಸೋರಿಯಾಸಿಸ್ ಗೆ ಚಿಕಿತ್ಸೆ                               

ತೊಂದರೆಗೆ ಒಳಪಡಿಸುವ ಗುಣಲಕ್ಷಣಗಳು ಮತ್ತು ಗಮನಕ್ಕೆ ಬರುವ ರೋಗವನ್ನು ಕಡಿಮೆಗೊಳಿಸಲು ಅನೇಕ ರೀತಿಯ ಚಿಕಿತ್ಸೆಗಳು ಲಭ್ಯವಿವೆ. ರೋಗದ ಗಂಭೀರತೆ, ಖರ್ಚು, ಚಿಕಿತ್ಸೆಯ ಅನುಕೂಲತೆ ಮತ್ತು ಚಿಕಿತ್ಸೆಗೆ ವ್ಯಕ್ತಿಯ ಸ್ಪಂದನೆಗೆ ಅನುಗುಣವಾಗಿ ಚಿಕಿತ್ಸೆಯು ಬದಲಾಗಬಹುದು. ಥೆರಪಿಗಳ ಸಂಯೋಜನೆಯನ್ನು ಹೆಚ್ಚಾಗಿ ಶಿಫಾರಸ್ಸು ಮಾಡಲಾಗುತ್ತದೆ.  (ಎಸ್.ಎಚ್)

Leave a Reply

comments

Related Articles

error: