ಮೈಸೂರು

ಮಲಗಿರುವ ಸ್ಥಿತಿಯಲ್ಲಿಯೇ ಮಹಿಳೆ ಸಾವು

ಮೈಸೂರು,ಜೂ.26:- ಮಲಗಿರುವ ಸ್ಥಿತಿಯಲ್ಲಿಯೇ ಮಹಿಳೆಯೋರ್ವರು ಸಾವನ್ನಪ್ಪಿರುವ ಘಟನೆ ರೂಪಾನಗರದಲ್ಲಿ ನಡೆದಿದೆ.

ಮೃತರನ್ನು ಇನ್ಫೋಸಿಸ್ ಉದ್ಯೋಗಿ ಶ್ವೇತಾ(36)ಎಂದು ಹೇಳಲಾಗಿದ್ದು, ಇವರು ಭಾನುವಾರ ರಾತ್ರಿ ಕುಟುಂಬಿಕರೊಂದಿಗೆ ಊಟ ಮಾಡಿ ಮಲಗಿದ್ದರು. ಸೋಮವಾರ ಬೆಳಿಗ್ಗೆ ಮಲಗಿದ್ದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಬಂದ ನಂತರವೇ ಸಾವಿನ ನಿಖರ ಕಾರಣ ತಿಳಿದು ಬರಲಿದೆ.

ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: