ಮನರಂಜನೆ

ಎಂಗೇಜ್ ಆದ ಕಿರುತೆರೆ ತಾರೆಯರಾದ ದೀಪಿಕಾ-ಆಕರ್ಷ್

ಬೆಂಗಳೂರು,ಜೂ.26-ಕಿರುತೆರೆ ನಟಿ ದೀಪಿಕಾ ಹಾಗೂ ನಟ ಆಕರ್ಷ್ ಅವರು ಪರಸ್ಪರ ಉಂಗುರ ಬದಲಾಯಿಸಿಕೊಂಡು ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಇವರ ನಿಶ್ಚಿತಾರ್ಥ ಸಮಾರಂಭಕ್ಕೆ ಕುಟುಂಬದವರು ಮತ್ತು ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಕಿರುತೆರೆಯ ಕೆಲವು ನಟ, ನಟಿಯರು ಭಾಗಿಯಾಗಿ ನವ ಜೋಡಿಗೆ ಶುಭಹಾರೈಸಿದರು. ಈ ಜೋಡಿ ನಿಶ್ಚಿತಾರ್ಥದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವರ್ಷದಿಂದ ಪ್ರೀತಿಸುತ್ತಿದ್ದ ಈ ಜೋಡಿ ಅಧಿಕೃತವಾಗಿ ಇಂದು ಎಂಗೇಜ್ ಆಗಿದೆ. ಆದಷ್ಟು ಬೇಗ ದಾಂಪತ್ಯ ಜೀವನಕ್ಕೂ ಕಾಲಿಡಲಿದ್ದಾರೆ. ಇತ್ತೀಚಿಗೆ ದೀಪಿಕಾ, ಆಕರ್ಷ್ ರ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ತಾವು ಮದುವೆಯಾಗುತ್ತಿರುವ ಹುಡುಗ. ಬಾವಿ ಪತಿಯೆಂದು ಪರಿಚಯಿಸಿದ್ದರು.

ದೀಪಿಕಾ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕುಲವಧು ಧಾರಾವಾಹಿಯಲ್ಲಿ ಧನ್ಯಾ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೊನ್ನೆಯಷ್ಟೆ ದೀಪಿಕಾ `ಮಿಸ್ ಸೌತ್ ಇಂಡಿಯಾ ಗ್ಲಾಮರ್ 2019’ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು.

ಆಕರ್ಷ್ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಮಾನಸ ಸರೋವರ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಇವರಿಬ್ಬರು ಕಿರುತೆರೆ ಮಾತ್ರವಲ್ಲದೆ ಬೆಳ್ಳಿಪರದೆಯಲ್ಲೂ ಕಾಣಿಸಿಕೊಂಡಿದ್ದಾರೆ. (ಎಂ.ಎನ್)

Leave a Reply

comments

Related Articles

error: