ಪ್ರಮುಖ ಸುದ್ದಿಮೈಸೂರು

ಇವಿಎಂ ಮತಯಂತ್ರ ನಿಷೇಧಕ್ಕೆ ಪತ್ರ ಚಳುವಳಿ : ರಾಷ್ಟ್ರಪತಿಗಳಿಗೆ ಮನವಿ

ಮೈಸೂರು, ಜೂ.26 :  ಇವಿಎಂ ವಜಾಗೊಳಿಸಿ ಬ್ಯಾಲೆಟ್ ಪೇಪರ್ ಜಾರಿಗೊಳಿಸಿ ಪ್ರಜಾಪ್ರಭುತ್ವ ರಕ್ಷಸಿ ಭಾರತವನ್ನು ಉಳಿಸಿ ಎಂಬ ಘೋಷಣೆಯಡಿ ಪತ್ರ ಚಳುವಳಿಯನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಇ.ವಿ.ಎಂ ನಿಷೇಧ ಹೋರಾಟ ಸಮಿತಿಯ ಮೈಸೂರು ವಿಭಾಗ ತಿಳಿಸಿತು.

ಬುಧವಾರ ನಗರದ ಪತ್ರಕರ್ತರ ಭವನದಲ್ಲಿ ಸಮಿತಿ ಸಂಚಾಲಕ ಪುರುಷೋತ್ತಮ್ ಮಾತನಾಡಿ, ಈಗಾಗಲೇ ರಾಜ್ಯದ ಅನೇಕ ಜಿಲ್ಲಾ ಕೇಂದ್ರ ಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ಗಳು ಹಾಗೂ ಕೇಂದ್ರ ಮುಖ್ಯ ಚುನಾವಣಾಧಿಕಾರಿಗಳಿಗೆ ಕೈ ಬರಹವಿರುವ ಪತ್ರಗಳನ್ನು ತಲುಪಿಸುತ್ತಿದ್ದೇವೆ ತಿಳಿಸಿದರು.

ಅದರಂತೆ ಮೈಸೂರು ವಿಭಾಗದಲ್ಲೂ ಇಂದು ಆರಂಭಿಸಲಾಗುತ್ತಿದ್ದು ಈಗಾಗಲೇ ಐದು ಸಾವಿರ ಅಂಚೆ ಪತ್ರಗಳ ಸಂಗ್ರಹವವಾಗಿದ್ದು ಅದನ್ನು ಇಂದು ಜಿಲ್ಲಾಧಿಕಾರಿಗಳಿಗೆ ನೀಡುವ ಮೂಲಕ ಮನವಿ ಮಾಡುವ ಮೂಲಕ ಪ್ರಾರಂಭಿಸಿದ್ದೇವೆ.

ಮುಂದುವರೆದು, ಇವಿಎಂ ಒಂದು ದೋಷ ಪೂರಿತವಾಗಿರುವ ಬಗ್ಗೆ ಹಲವಾರು ಸಾಕ್ಷಿ ಪೂರವೆಗಳು ಲಭ್ಯವಾಗಿವೆ, ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಹಲವಾರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಗಳಿಸಿದ ಮತಕ್ಕೂ ಹಾಗೂ ನೊಂದಾಯಿತ ಮತಗಳಿಗೂ ಬಹು ವ್ಯತ್ಯಾಸ ಕಂಡು ಬಂದಿದ್ದು, ಇದರಿಂದ ಯಂತ್ರವು ದೋಷಪೂರಿತವಾಗಿದೆ, ಅಲ್ಲದೆ ಇದನ್ನು ಹ್ಯಾಕ್ ಮಾಡಿರುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ, ಆದ್ದರಿಂದ ವಿಶ್ವದ ಅನೇಕ ಪ್ರಬಲ ರಾಷ್ಟ್ರಗಳಲ್ಲಿ ಇವಿಎಂ ನಿಷೇಧಿಸಿದೆ ಹೀಗಿದ್ದರೂ ನಮ್ಮ ದೇಶಕ್ಕೆ ಏಕೆ ಬೇಕು? ಈ ಬಗ್ಗೆ ದೇಶದ ಪ್ರಜೆಗಳಾಗಿ ನಾವು ಇವಿಎಂ ಎಂದು ಜಾಗೃತಿ ಮೂಡಿಸುತ್ತಿದ್ದು ಈ ನಿಟ್ಟಿನಲ್ಲಿ ಇವಿಎಂ ನಿಷೇಧಿಸಬೇಕೆಂದು ರಾಷ್ಟ್ರಪತಿಗಳಿಗೆ ಹಾಗೂ ಚುನಾವಣಾಧಿಕಾರಿಗಳಿಗೆ ಪತ್ರ ಮುಖೇನಾ ಮನವಿ ಮಾಡಲಾಗುವುದು ಎಂದರು.

ತುಂಬಲ ರಾಮಣ್ಣ , ಪುಟ್ಟಸ್ವಾಮಿ, ಜೈ ಶಂಕರ್ ಶ್ಯಾಮ್, ಪ್ರಸಾದ್ ನಾಡನಹಳ್ಳಿ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: