ಮೈಸೂರು

ಒಕ್ಕಲಿಗ ನಾಯಕರುಗಳಿಗೆ ಪ್ರಸನ್ನಾನಂದ ಸ್ವಾಮಿಗಳು ಏಕವಚನದಲ್ಲಿ ನಿಂದನೆ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ

ಮೈಸೂರು,ಜೂ.26:- ನಿನ್ನೆ ಬೆಂಗಳೂರಿನಲ್ಲಿ  ವಾಲ್ಮೀಕಿ ಮಠದ ಗುರುಗಳಾದ ಪ್ರಸನ್ನಾನಂದ ಸ್ವಾಮಿಗಳು ಒಕ್ಕಲಿಗ ಸಮುದಾಯವನ್ನ ಗುರಿಯಾಗಿಸಿಕೊಂಡು ಒಕ್ಕಲಿಗ ನಾಯಕರುಗಳಿಗೆ ಏಕವಚನದಲ್ಲಿ ನಿಂದನೆ ಮಾಡಿರುವುದನ್ನು ವಿರೋಧಿಸಿ ಮತ್ತು ಅವರ ಹೇಳಿಕೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ನಾಡಪ್ರಭು ಕೆಂಪೇಗೌಡ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ನ್ಯೂ ಕಾಂತ್ ರಾಜ್ ಅರಸ್ ಬಳಿಯಿರುವ ಕನ್ನೇಗೌಡನ ಕೊಪ್ಪಲಿನಲ್ಲಿರುವ ಸಮಿತಿ ಕಛೇರಿ ಬಳಿ ಇಂದು ಪ್ರತಿಭಟನೆ ನಡೆಸಿದ   ಒಕ್ಕಲಿಗ ಮುಖಂಡ ರಾಜ್ ಕುಮಾರ್ ಸ್ವಾಮೀಜಿಗಳು ತಮ್ಮ ಘನತೆಗೆ ತಕ್ಕ ಮಾತುಗಳನ್ನು ಆಡದೆ ಕೆಳಸ್ಥರದ ಮಾತುಗಳನ್ನು ಆಡುವ ಮೂಲಕ ಗುರುಪರಂಪರೆಗೆ ಅಪಮಾನಿಸಿದ್ದಾರೆ ಎಂದು ಹೇಳಿದರು.

ನಂತರ ಮಾತಾಡಿದ ರಜಕೀಯ ರವಿ ನಮ್ಮ ಸಮುದಾಯದ ಮುಖ್ಯಮಂತ್ರಿಗಳಿಗೆ,ಮಾಜಿ ಪ್ರಧಾನಿಗಳಿಗೆ ಅಪಮಾನಿಸುವ ರೀತಿಯಲ್ಲಿ ಮಾತುಗಳನ್ನು ಆಡಿರುವುದು ನಮ್ಮ ಒಕ್ಕಲಿಗ ಸಮುದಾಯಕ್ಕೆ ಮಾಡಿದ ಅಪಮಾನ.  ಅವರು ನಮ್ಮ ಸಮುದಾಯವನ್ನು ಕೆಣಕಿದ್ದಾರೆ. ಸಮಾಜದ ಸಾಮರಸ್ಯವನ್ನು ಹಾಳುಮಾಡುವ ಮಾತನ್ನಾಡಿದ್ದಾರೆ.  ಸ್ವಾಮೀಜಿ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ಅವರು ದೊಡ್ಡವರು. ಕ್ಷಮಾಪಣೆ ಕೇಳಬೇಕೆಂಬುದನ್ನು ನಮ್ಮ ಒಕ್ಕಲಿಗ ಸಮಾಜ ನಿರೀಕ್ಷೆ ಮಾಡುವುದಿಲ್ಲ ಎಂದರು.

ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯರಾದ ಕಿರಣ್ ಗೌಡ,ಮೈಸೂರು ರಕ್ಷಣಾ ವೇದಿಕೆ ಉಪಾಧ್ಯಕ್ಷ ಕುಮಾರ್ ಗೌಡ ಸತೀಶ್ ಗೌಡ, ರವಿಗೌಡ,ಸತೀಶ್,ಗೋಪಾಲ್ ಮತ್ತಿತರರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: