ಸುದ್ದಿ ಸಂಕ್ಷಿಪ್ತ

ಮೈಸೂರಿನ ಮೂವರಿಗೆ ಪ್ರಾಪ್ತಿಯಾಯಿತು ‘ವಿಜಯೀಂದ್ರಾನುಗ್ರಹ ಪ್ರಶಸ್ತಿ’

ಮೈಸೂರು, ಜೂ.27 : ಕುಂಭಕೋಣಂ ಕ್ಷೇತ್ರದ ಶ್ರೀರಾಘವೇಂದ್ರ ತೀರ್ಥ ಗುರುಸಾರ್ವಭೌಮ ಶ್ರೀ ವಿಜಯೀಂದ್ರ ತೀರ್ಥರ 405ನೇ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಕೊಡಮಾಡಲ್ಪಡುವ ವಿಜಯೀಂದ್ರಾನುಗ್ರಹ ಪ್ರಶಸ್ತಿಗೆ ನಗರದ ಮೂವರು ಸಾಧಕರು ಪಾತ್ರರಾಗಿರುವರು.

ಜೂ.28, 30, ಮತ್ತು ಜುಲೈ1ರಂದು ತಮಿಳುನಾಡಿನ ಕುಂಭಕೋಣಂನಲ್ಲಿ ಕಾರ್ಯಕ್ರಮ ನಡೆಯಲಿದೆ. ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದ ಸೇವೆಗೆ ಜಿ.ಚಂದ್ರಿಕಾ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರದ ಸಾಧನೆಗೆ ಬಿ.ಆರ್.ನಟರಾಜ ಜೋಯಿಸ್ ಹಾಗೂ ದಾಸ ಸಾಹಿತ್ಯ ಕ್ಷೇತ್ರ ಪ್ರಚಾರಕ ಎಸ್.ರವಿಕುಮಾರ್ ಅವರುಗಳು ಪ್ರಶಸ್ತಿಗೆ ಪಾತ್ರರಾಗಿರುವರು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: