ಸುದ್ದಿ ಸಂಕ್ಷಿಪ್ತ
ಮಾತು ಮತ್ತು ಧ್ವನಿ ವಿಶ್ಲೇಷಣೆ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರ
ಮೈಸೂರು,ಜೂ.27: ಜೆಎಸ್ಎಸ್ ವಾಕ್ ಶ್ರವಣ ಸಂಸ್ಥೆಯಿಂದ ಮಾತು ಮತ್ತು ಧ್ವನಿ ವಿಶ್ಲೇಷಣೆ ಎರಡು ದಿನಗಳ ರಾಷ್ಟ್ರೀಯಮಟ್ಟದ ಕಾರ್ಯಾಗಾರವನ್ನು ಜೂ.28,29ರಂದು ರಾಜೇಂದ್ರಭವನದಲ್ಲಿ ಏರ್ಪಡಿಸಲಾಗಿದೆ.
ಸಂಸ್ಥೆ ನಿರ್ದೇಶಕಿ ಪ್ರೊ.ಎಂ.ಪುಷ್ಪವತಿ ಉದ್ಘಾಟಿಸುವರು.ಮೈಂಬೈನ ಅಲಿ ಯವರ್ ಜಂಗ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಡಿಸೆಬಲಿಟೀಸ್ ಪ್ರೊ.ಆರ್.ರಂಗಸಾಯಿ ಮುಖ್ಯ ಅತಿಥಿಗಳಾಗಿರುವರು, ಜೆಎಸ್ಎಸ್ ವಿದ್ಯಾಪೀಠದ ನಿರ್ದೇಶಕ ಆರ್.ಮಹೇಶ್ ಅಧ್ಯಕ್ಷತೆ ವಹಿಸುವರು, ದೇಶದ ವಿವಿದೆಡೆಯಿಂದ ನೂರು ತಜ್ಞರು ಭಾಗವಹಿಸುವರು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)