ಮೈಸೂರು

ಬೀರಿಹುಂಡಿಯಿಂದ ಹೆಚ್.ಡಿ.ಕೋಟೆಯವರೆಗೆ ಜೋಡಿ ಮಾರ್ಗದ ಡಾಂಬರ್ ರಸ್ತೆಗೆ ಒತ್ತಾಯ

ಮೈಸೂರು,ಜೂ.27 : ಬೀರಿಹುಂಡಿಯಿಂದ ಹೆಚ್.ಡಿ.ಕೋಟೆಯವರೆಗೂ ರಸ್ತೆಯು ಕಿರಿದಾಗಿದ್ದು ವಾಹನ ಹಾಗೂ ಜನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಆದ್ದರಿಂದ ಇಲ್ಲಿ ಜೋಡಿ ಮಾರ್ಗದ ಡಾಂಬರ್ ರಸ್ತೆ ನಿರ್ಮಿಸಬೇಕೆಂದು ಕರ್ನಾಟಕ ಪ್ರಜಾ ಪಾರ್ಟಿ ಒತ್ತಾಯಿಸಿದೆ.

ಸದರಿ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ, ಅಲ್ಲದೇ ಬೀರಿ ಹುಂಡಿಯವರೆಗೆ ಡಬಲ್ ಟ್ರಾಕ್ ಮಾಡಿರುವುದು ಮಲತಾಯಿ ಧೋರಣೆಯಾಗಿದ್ದು ಆದ್ದರಿಂದ ಹೆಚ್.ಡಿ.ಕೋಟೆಯವರೆಗೂ ವಿಸ್ತರಿಸಬೇಕಾಗಿದೆ.

ನಿತ್ಯ ವಾಹನ ಸಂಚಾರ ದಟ್ಟಣೆ ಹೆಚ್ಚಿದೆ, ರೈತಾಪಿ ವರ್ಗದವರು, ತರಕಾರಿ ವ್ಯಾಪಾರಿಗಳು, ವಿದ್ಯಾಬ್ಯಾಸಕ್ಕೆಂದು ತೆರಳುವ ಮಕ್ಕಳು ಶಾಲಾ ಬಸ್ಸು ಸಂಚರಿಸುತ್ತವೆ, ಅಲ್ಲದೇ ರೈತಾಪಿ ವರ್ಗ ತರಕಾರಿ ದಿನಸಿಗಳನ್ನು ಗೂಡ್ಸ್ ವಾಹನಗಳಲ್ಲಿ ತುಂಬಿಕೊಂಡು ನಗರಕ್ಕೆ ಬರಬೇಕಾಗಿದ್ದು, ಪ್ರಸ್ತುತ ರಸ್ತೆಯ ಕಿರಿದಾಗಿದ್ದು ಸರ್ಕಾರ ಈ ಕೂಡಲೇ ಕ್ರಮ ವಹಿಸಬೇಕೆಂದು ಆಗ್ರಹಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: