ಪ್ರಮುಖ ಸುದ್ದಿ

ಜೂ.29 : ವಸತಿ ಸಚಿವ ಎನ್.ನಾಗರಾಜ ಕೊಡಗು ಜಿಲ್ಲೆಗೆ ಭೇಟಿ

ರಾಜ್ಯ(ಮಡಿಕೇರಿ) ಜೂ.28 :- ವಸತಿ ಸಚಿವ ಎನ್.ನಾಗರಾಜ ಎಂ.ಟಿ.ಬಿ ಅವರು ಜೂ.29 ರಂದು  ಕೊಡಗು ಜಿಲ್ಲೆಯ ಮಳೆಹಾನಿ ಪರಿಹಾರ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ಜಂಬೂರು, ಮಧ್ಯಾಹ್ನ 12.15 ಗಂಟೆಗೆ ಕರ್ಣಂಗೇರಿ ಹಾಗೂ ಮಧ್ಯಾಹ್ನ 1 ಗಂಟೆಗೆ ಮಡಿಕೇರಿ ತಾಲ್ಲೂಕಿನ ಮದೆ ಈ ಗ್ರಾಮಗಳಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ನಿರಾಶ್ರಿತರಿಗೆ ನಿರ್ಮಿಸಲಾಗುತ್ತಿರುವ ವಸತಿ ಕಾಮಗಾರಿಗಳ ಪರಿವೀಕ್ಷಣೆ ಮಾಡಲಿದ್ದಾರೆ ಎಂದು ವಸತಿ ಸಚಿವರ ಆಪ್ತ ಕಾರ್ಯದರ್ಶಿ ಎಂ.ಕೆ.ಜಗದೀಶ್ ಅವರು ತಿಳಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: