ಪ್ರಮುಖ ಸುದ್ದಿ

ವಿರಾಜಪೇಟೆಯಲ್ಲಿ ಭೌತಶಾಸ್ತ್ರ ಹಾಗೂ ಗಣಿತಶಾಸ್ತ್ರದ ಕಾರ್ಯಾಗಾರ

ರಾಜ್ಯ(ಮಡಿಕೇರಿ) ಜೂ.28 :- ವಿರಾಜಪೇಟೆ ಸರ್ವೋದಯ ಕಾಲೇಜ್ ಆಪ್ ಎಜುಕೇಶನ್ ಆಶ್ರಯದಲ್ಲಿ ಜೆ.ಎ & ಸನ್ಸ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ತಾಲೂಕು ಮಟ್ಟದ ಭೌತಶಾಸ್ತ್ರ ಹಾಗೂ ಗಣಿತಶಾಸ್ತ್ರದ ಕಾರ್ಯಾಗಾರ ಎರಡು ದಿನ ನಡೆಯಿತು.
ವಿರಾಜಪೇಟೆಯಲ್ಲಿ ನಡೆದ ಕಾರ್ಯಾಗಾರವನ್ನು ಕೊಡಗು ಅನುದಾನ ರಹಿತ ಶಾಲಾ ಆಡಳಿತ ಒಕ್ಕೂಟದ ಕಾರ್ಯದರ್ಶಿ ತಿಮ್ಮಯ್ಯ ಕೊಟ್ರಂಗಡ ಅವರು ಉದ್ಘಾಟಿಸಿ ಮಾತನಾಡಿ ಈ ರೀತಿಯ ಕಾರ್ಯಕ್ರಮಗಳು ಜೌದ್ಯೋಗಿಕ ಬೆಳವಣಿಗೆಗೆ ಸಹಾಯಕವಾಗಲಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿ.ಎಸ್.ಮಚ್ಚಾದೋ ಅವರು ಇಂತಹ ಕಾರ್ಯಗಾರಗಳು ಪ್ರೌಢಶಾಲಾ ವಿದ್ಯಾರ್ಥಿಗಳ ಫಲಿತಾಂಶದ ಮಟ್ಟ ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಶಿಕ್ಷಕರ ಮೂಲಕ ಪ್ರವಹಿಸಿದ ಜ್ಞಾನವು, ವಿದ್ಯಾರ್ಥಿಗಳಲ್ಲಿ ಕ್ರಿಯಾತ್ಮಕ ಹಾಗೂ ವಿಶ್ಲೇಷಣಾತ್ಮಕ ಸಾಮರ್ಥ್ಯ ಹೆಚ್ಚಿಸುವಲ್ಲಿ ಪೂರಕವಾಗುವ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.
ಕಾಲೇಜ್‍ನ ಪ್ರಾಂಶುಪಾಲರಾದ ಡಾ.ಎಂ.ವಾಣಿ ಕಾರ್ಯಕ್ರಮದ ಪ್ರಸ್ತುತೆಯನ್ನು ತಿಳಿಸಿದರು. ಕಾರ್ಯಗಾರದ ಸಂಯೋಜಕರಾದ ಗಿರೀಶ್ ಹೆಚ್.ಆರ್, ಸಂಸ್ಥೆಯ ಅಧ್ಯಕ್ಷರಾದ ಸೂರ್ಯಕುಮಾರಿ ಸಿ.ಜಿ, ಕೋಶಾಧಿಕಾರಿ ವಾಸಂತಿ ಹಾಗೂ ಎಲ್ಲಾ ಬೋಧಕ ವೃಂದದವರು ಹಾಜರಿದ್ದರು. ಸಹಾಯಕ ಪ್ರಾಧ್ಯಾಪಕರಾದ ಸುಜಾತಾ ಕಾರ್ಯಕ್ರಮ ನಿರೂಪಿಸಿ ವಿದ್ಯಾರ್ಥಿ ನಾಯಕಿ ಸುಮನ್ ವಂದಿಸಿದರು. ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳಾದ ಹರ್ಷ, ಸತೀಶ್, ಹಾಗೂ ಕಿರಣ್ ಕುಮಾರ್ ನಡೆಸಿದ ಕಾರ್ಯಗಾರದಲ್ಲಿ, ವಿರಾಜಪೇಟೆ ತಾಲೂಕಿನ ಎಲ್ಲಾ ಅನುದಾನರಹಿತ ಪ್ರೌಢಶಾಲೆಯ ಅರವತ್ತು ಶಿಕ್ಷಕರು ಪಾಲ್ಗೊಂಡಿದ್ದರು.
ಇಂದು ನಡೆದ ಸಮಾರೋಪ ಸಮಾರಂಭದಲ್ಲಿ ವಿರಾಜಪೇಟೆ ರೋಲಿಕ್ಸ್ ಪ್ರೌಢಶಾಲಾ ಕಾರ್ಯನಿರ್ವಾಹಕ ಸಿ.ಎಸ್.ಕಾವೇರಪ್ಪ ಅವರು ಸಮಾರೋಪ ಭಾಷಣ ಮಾಡಿದರು. ಕಾರ್ಯಗಾರದ ಸಂಯೋಜನಾಧಿಕಾರಿ ಗಿರೀಶ್ ಹೆಚ್.ಆರ್ ಸ್ವಾಗತಿಸಿ, ಸಹಾಯಕ ಪ್ರಾಧ್ಯಾಪಕರಾದ ಸುಜಾತ ವಂದಿಸಿದರು. ಅನುದಾನರಹಿತ ಪ್ರೌಢಶಾಲೆಯ ಶಿಕ್ಷಕರಿಗೆ ವಿನೂತನವಾದ ಅನುಭವವನ್ನು ನೀಡಿದ ಈ ಕಾರ್ಯಾಗಾರದ ಸಮಾರಂಭವನ್ನು ವಿದ್ಯಾರ್ಥಿಗಳಾದ ಸುಮನ್ ಹಾಗೂ ಚರಿಷ್ಮಾ ನಡೆಸಿಕೊಟ್ಟರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: