
ಪ್ರಮುಖ ಸುದ್ದಿ
ಭಯೋತ್ಪಾದನೆ ಮನುಕುಲಕ್ಕೆ ದೊಡ್ಡ ಅಪಾಯ, ಬೆಂಬಲಿಸುವ ಪ್ರತಿಯೊಂದು ಮಾರ್ಗವನ್ನೂ ಬಂದ್ ಮಾಡಬೇಕು : ಪ್ರಧಾನಿ ನರೇಂದ್ರ ಮೋದಿ
ಜಪಾನ್ ಅಮೇರಿಕಾ ಇಂಡಿಯಾ ಅರ್ಥ 'ಜಯ' ಎಂದ್ರು ಪ್ರಧಾನಿ ಮೋದಿ
ವಿದೇಶ(ಒಸಾಕಾ)ಜೂ.28:- ಭಯೋತ್ಪಾದನೆ ಮನುಕುಲಕ್ಕೆ ದೊಡ್ಡ ಅಪಾಯ. ಭಯೋತ್ಪಾದನಾ ಕೃತ್ಯಗಳು ಮುಗ್ಧರನ್ನು ಬಲಿ ಪಡೆಯುವುದು ಮಾತ್ರವಲ್ಲ, ಅದರ ನಕಾರಾತ್ಮಕತೆಯು ದೇಶದ ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ ಸ್ಥಿರತೆ, ಧಾರ್ಮಿಕ ಸಾಮರಸ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಭಯೋತ್ಪಾದನೆಯನ್ನು ಬೆಂಬಲಿಸುವ ಪ್ರತಿಯೊಂದು ಮಾರ್ಗವನ್ನೂ ನಾವು ಬಂದ್ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಜಪಾನ್ನ ಒಸಾಕಾದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ಹಿನ್ನೆಲೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಅನೌಪಚಾರಿಕ ಸಭೆಯಲ್ಲಿ ಮಾತನಾಡಿದರು. ಭಯೋತ್ಪಾದನೆ ಮತ್ತು ಜಾತಿವಾದಕ್ಕೆ ಕುಮ್ಮಕ್ಕು ನೀಡುವ ಎಲ್ಲ ಮಾರ್ಗಗಳನ್ನು ಬಂದ್ ಮಾಡುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.
ಇದಕ್ಕೂ ಮುನ್ನ ಶೃಂಗಸಭೆಯಲ್ಲಿ ಭಾರತ, ಅಮೇರಿಕ ಮತ್ತು ಜಪಾನ್ ನಡುವೆ ತ್ರಿಪಕ್ಷೀಯ ಮಾತುಕತೆ ನಡೆದಿತ್ತು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯಾದರು. ಈ ಸಭೆಯಲ್ಲಿ ಉಭಯ ನಾಯಕರು ಹಲವಾರು ವಿಷಯಗಳ ಕುರಿತು ಚರ್ಚಿಸಿದರು. ಅದರಲ್ಲಿ ಭಾರತ ಮತ್ತು ಅಮೇರಿಕ ನಡುವಿನ ವ್ಯಾಪಾರ, 5ಜಿ, ರಕ್ಷಣಾ ಕ್ಷೇತ್ರ ಸೇರಿದಂತೆ ಹಲವು ವಿಷಯಗಳನ್ನು ಚರ್ಚಿಸಲಾಯಿತು. ಅಮೆರಿಕ ಅಧ್ಯಕ್ಷರು ಪ್ರಧಾನಿ ಮೋದಿಯವರ ಅದ್ಭುತ ವಿಜಯವನ್ನು ಅಭಿನಂದಿಸಿದರು. ಈ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು. ಅಮೇರಿಕ, ಜಪಾನ್ ಭಾರತಗಳು ಒಟ್ಟಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ. ಅಮೇರಿಕ, ಜಪಾನ್ ಭಾರತ ಅರ್ಥ’ ಜಯ’ ಎಂದು ತಿಳಿಸಿದರು. ಇದೇ ವೇಳೆ ಭಾರತದ ಜೊತೆಗಿನ ಸಂಬಂಧ ಉತ್ತಮವಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ. (ಎಸ್.ಎಚ್)