ಮೈಸೂರು

ನಾಡಪ್ರಭು ಕೆಂಪೇಗೌಡ ಸೇವಾ ಭೀಷ್ಮ ಪ್ರಶಸ್ತಿ ಪ್ರದಾನ

ಮೈಸೂರು,ಜೂ.28-ನಾಡಪ್ರಭು ಕೆಂಪೇಗೌಡ ಜಯಂತಿ ಪ್ರಯುಕ್ತ ಪರಿವರ್ತನಂ ಟ್ರಸ್ಟ್ ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ಇಂದು ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಸೇವಾ ಭೀಷ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಒಂಬತ್ತು ಮಂದಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಸಾಮಾಜಿಕ ಕ್ಷೇತ್ರದಲ್ಲಿ ಅವಿರತ ಸೇವೆ ಸಲ್ಲಿಸಿರುವ ಸಿ.ಜಿ.ಗಂಗಾಧರ್, ಎ.ಎನ್.ರಾಮು, ವಿಜಯಕುಮಾರ್, ಆರ್.ರವಿಕುಮಾರ್(ರಾಜಕೀಯ), ಪ್ರಸನ್ನ ಲಕ್ಷಣ್, ಬಿ.ಇ.ಗಿರೀಶ್ ಗೌಡ, ಎ.ರವಿ, ಸತೀಶ್ ಗೌಡ, ಚರಣ್ ರಾಜ್ ಇವರುಗಳಿಗೆ ನಾಡ ಪ್ರಭು ಕೆಂಪೇಗೌಡ ಭೀಷ್ಮ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಮಾತನಾಡಿದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ರಾಜ್ಯದ ರಾಜಧಾನಿ ಬೆಂಗಳೂರಿನ ಅಭಿವೃದ್ಧಿಗಾಗಿ ಅಪಾರ ಶ್ರಮಿಸಿದವರು ನಾಡಪ್ರಭು ಕೆಂಪೇಗೌಡರೆಂದರೆ ಅತಿಶಯೋಕ್ತಿಯೇನಲ್ಲ. ಕೆಂಪೇಗೌಡರ ದೂರದೃಷ್ಟಿಯಿಂದಾಗಿ ಬೆಂಗಳೂರು ಇಂದು ಬೃಹತ್ ಪ್ರಮಾಣದಲ್ಲಿ ಬೆಳೆದಿದೆ. ಬೆಂಗಳೂರಿನಲ್ಲಿ ಒಳ್ಳೆಯ ಆಡಳಿತ ನೆಡೆಸಲು ಅನುಕೂಲವಾಗುವಂತೆ ಹಲವಾರು ಮಾರ್ಗದರ್ಶನಗಳನ್ನು ನೀಡಿದ್ದರು. ಅವರ ಮಾರ್ಗದರ್ಶನಗಳಂತೆ ನಡೆದುಕೊಂಡು ಬಂದ ಉತ್ತಮ ಆಡಳಿತದಿಂದಾಗಿ ಬೆಂಗಳೂರು ಇಂದು ಐ.ಟಿ. ಸಿಟಿಯಾಗಿ ಪರಿವರ್ತನೆಗೊಂಡಿದೆ. ಇಂತಹ ಮಹಾನುಭಾವರ ಹೆಸರನ್ನು ಬೆಂಗಳೂರಿನ ಅಂತಾರಾಷ್ಟೀಯ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಿರುವುದು ಅತ್ಯಂತ ಶ್ಲಾಘನೀಯ ಎಂದರು.

ಸಮಾಜ ಸೇವಕ ರಘುರಾಂ ಕೆ.ವಾಜಯಪೇಯಿ ಮಾತನಾಡಿ, ಯಾವುದಾದರೂ ಒಂದು ಬಡಾವಣೆಗೆ ಕೆಂಪೇಗೌಡ ನಗರ ಎಂದು ನಾಮಕರಣ ಮಾಡುಯವಂತೆ ನಗರಾಭಿವೃದ್ಧಿ ಪ್ರಾಧಿಕಾರವನ್ನು ಈ ವೇಳೆ ಮನವಿ ಮಾಡಿದರು.

ಮೇಯರ್ ಪುಷ್ಪಲತಾ ಜಗನ್ನಾಥ್ ಮಾತನಾಡಿ, ಮೈಸೂರು ಸಂಸ್ಧಾನದ ಸರ್ವತೋಮುಖ ಅಭಿವೃದ್ಧಿಗೆ ನಾಲ್ವಡಿ ಕೃಷ್ಣ ರಾಜ ಒಡೆಯರ್ ರವರು ಶ್ರಮಿಸಿದಂತೆ ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಗೆ ನಾಡಪ್ರಭು ಕೆಂಪೇಗೌಡರ ಶ್ರಮಿಸಿದ್ದರು. ಹಾಗಾಗಿ ಇವರಿಬ್ಬರ ಹೆಸರುಗಳು ಇಂದಿಗೂ ರಾರಾಜಿಸುತ್ತಿವೆ ಎಂದು ಹೇಳಿದರು.

ಸಮಾರಂಭದಲ್ಲಿ ಸಮಾಜ ಸೇವಕ ಯಶಸ್ವಿನಿ ಸೋಮಶೇಖರ್, ಬಿ.ಎಸ್.ಪಿ.ನಗರಾಧ್ಯಕ್ಷ ಬಿ.ಬಸವರಾಜು,  ಜೀವಧಾರ ರಕ್ತ ನಿಧಿ ಕೇಂದ್ರದ ಮುಖ್ಯಸ್ಧ ಗಿರೀಶ್, ಜೆಡಿಎಸ್ ಮುಖಂಡ ಪ್ರದೀಪ್ ಗೌಡ ಉಪಸ್ಥಿತರಿದ್ದರು. (ಎಂ.ಎನ್)

 

Leave a Reply

comments

Related Articles

error: