ಪ್ರಮುಖ ಸುದ್ದಿಮೈಸೂರು

ಕೇವಲ ಜನಪ್ರತಿನಿಧಿಗಳಿಂದ ಅಥವಾ ಅಧಿಕಾರಿಗಳಿಂದ ಪರಿಸರ ಸಂರಕ್ಷಣೆ ಅಸಾಧ್ಯ : ಶಾಸಕ ಡಾ.ಸುಧಾಕರ್

ಮೈಸೂರು,ಜೂ.28:- ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ  ಬಳಿಕ ಮೈಸೂರಿಗೆ ಮೊದಲ ಬಾರಿಗೆ   ಶಾಸಕ ಡಾ.ಸುಧಾಕರ್  ಭೇಟಿ ನೀಡಿದರು.

ಮೈಸೂರಿಗೆ ಆಗಮಿಸಿದ ಅವರನ್ನು ಕಾಂಗ್ರೆಸ್ ಕಛೇರಿಯಲ್ಲಿಂದು ಅವರನ್ನು ಮಾಜಿ ಶಾಸಕ ಸೋಮಶೇಖರ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭ ಮಾಧ್ಯಮಗಳೊಂದಿಗ ಮಾತನಾಡಿದ ಶಾಸಕ ಡಾ.ಸುಧಾಕರ್ ಮೈಸೂರು ಸ್ವಚ್ಛತೆಯಲ್ಲಿ  ವಿಶೇಷತೆ ಪಡೆದುಕೊಂಡಿದೆ. ಹೀಗಾಗಿಯೇ  ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಬಂದಿದ್ದೇನೆ. ನಾನು ವೈದ್ಯನೂ  ಆಗಿದ್ದರಿಂದ  ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷನಾಗಿರುವುದರಿಂದ ಸಮಗ್ರವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗತ್ತದೆ. ಪರಿಸರವನ್ನು ರಕ್ಷಣೆ ಮಾಡುವುದು ನಮ್ಮ ಕೆಲಸ. ಗಡಿಯಲ್ಲಿ ದೇಶವನ್ನು ಕಾಯುವಷ್ಟೇ  ಪರಿಸರವನ್ನು ಕಾಪಾಡುವ ಅಗತ್ಯತೆ ಇದೆ. ಯಾಂತ್ರಿಕ ಬದುಕಿನಲ್ಲಿ ಪರಿಸರ ಹಾಳು ಮಾಡುವ  ಕೆಲಸವಾಗ್ತಿದೆ. ಕೇವಲ ಜನಪ್ರತಿನಿಧಿಗಳಿಂದ  ಅಥವಾ ಅಧಿಕಾರಿಗಳಿಂದ ಪರಿಸರ ಸಂರಕ್ಷಣೆ ಅಸಾಧ್ಯ , ಇದರಲ್ಲಿ ಪ್ರತಿಯೊಬ್ಬ ನಾಗರಿಕರು ಭಾಗಿಯಾಗಬೇಕು. ಸ್ವಚ್ಛ ನಗರಿ ಎಂದು ಬಿರುದು ಪಡೆದುಕೊಂಡಿರುವ ಮೈಸೂರಿನಿಂದಲೇ ನಾನು ಪ್ರವಾಸ ಆರಂಭಿಸಿದ್ದೇನೆ  ಎಂದರು.

ಈ ಸಂದರ್ಭ ಮಾಜಿ ಶಾಸಕ ವಾಸು, ಕಾಂಗ್ರೆಸ್ ನಗರಾಧ್ಯಕ್ಷ ಮೂರ್ತಿ, ಮೇಯರ್ ಪುಷ್ಪಲತಾ ಜಗನ್ನಾಥ್ ಮತ್ತಿತರರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: