ಮೈಸೂರು

ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ಸಂಸತ್ ಉದ್ಘಾಟನೆ

ಮೈಸೂರು, ಜೂ.28- ನಗರದ ಬೋಗಾದಿ ಮುಖ್ಯರಸ್ತೆಯಲ್ಲಿರುವ ಬೋಗಾದಿ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ಶಾಲಾ ಸಂಸತ್ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಶಾಲಾ ಮುಖ್ಯೋಪಾಧ್ಯಾಯಿನಿ ಝರೀನಾ ಬಾಬುಲ್ ಮತ್ತು ಸಹ ಶಿಕ್ಷಕ ಫಾರುಖ್‍  ನೂತನವಾಗಿ ರಚನೆಯಾದ ಶಾಲಾ ಸಂಸತ್ತಿನ ಎಲ್ಲಾ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರಲ್ಲದೇ ಕಾರ್ಯ ಚಟುವಟಿಕೆಯ ಮಾಹಿತಿ ನೀಡಿದರು.

ಶಾಲಾ ಸಂಸತ್ತು ಉದ್ಘಾಟಿಸಿ ಮಾತನಾಡಿದ ಶಾಲಾ ಸಂಯೋಜನಾಧಿಕಾರಿ   ಕಾಂತಿ ನಾಯಕ್‍  ವಿದ್ಯಾರ್ಥಿ ದೆಸೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಮಾಹಿತಿ ದೊರೆಯಲು ಮತ್ತು ನಾಯಕತ್ವ ರಚಿಸಿಕೊಳ್ಳಲು ಶಾಲಾ ಸಂಸತ್ ವ್ಯವಸ್ಥೆ ಸಹಕಾರಿಯಾಗಿದೆ. ನಿಮ್ಮ ಕರ್ತವ್ಯವನ್ನು ಶಿಸ್ತಿನಿಂದ ಸರಿಯಾಗಿ ನಿಭಾಯಿಸಿಕೊಂಡು ಹೋಗಬೇಕೆಂದು ಕಿವಿಮಾತು ಹೇಳಿದರು.

ಕನ್ನಡ ಶಿಕ್ಷಕ ಎಸ್.ಡಿ.ಚಿಕ್ಕಣ್ಣ ಮಾತನಾಡಿ, ಭಾರತ ದೇಶಕ್ಕೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍  ಸಂವಿಧಾನವನ್ನು ಬರೆದುಕೊಟ್ಟರು. ಆ ಸಂವಿಧಾನದ ಆಧಾರದ ಮೇಲೆ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಎಂದು ವಿಭಾಗ ಮಾಡಿ ಕರ್ತವ್ಯವನ್ನು ಹಂಚಲಾಗಿದೆ. ಮತದಾನದ ಹಕ್ಕು ಮತ್ತು ಕರ್ತವ್ಯವನ್ನು ಹದಿನೆಂಟು ವರ್ಷಗಳ ನಂತರ ಯುವಕ, ಯುವತಿಯರು ತಿಳಿದುಕೊಳ್ಳುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಶಾಲಾ ಹಂತದ ಮಕ್ಕಳಿಗೆ ಸಂವಿಧಾನದ ಪರಿಚಯ, ಆಡಳಿತ ವ್ಯವಸ್ಥೆ, ಮತದಾನದ ಅನಿವಾರ್ಯತೆ, ಚುನಾವಣೆಯ ಅವಶ್ಯಕತೆ ಏನೆಂಬುದನ್ನು ತಿಳಿಸಲು ಚುನಾವಣೆಯನ್ನು ಶಾಲೆಯಲ್ಲಿ ನಡೆಸಲಾಗುತ್ತಿದೆ. ಇದರಿಂದ ಆಯ್ಕೆಯಾದವರು ಜೀವನದಲ್ಲಿ ಶಾಂತಿ, ನೆಮ್ಮದಿ, ತಾಳ್ಮೆ, ನಿಷ್ಠೆ ಹಾಗೂ ಸಹೃದಯರಾಗಿ ತಮಗೆ ಕೊಟ್ಟಿರುವ ಅಧಿಕಾರವನ್ನು ಸರಿಯಾಗಿ ನಿಭಾಯಿಸಬೇಕೆಂದು ತಿಳಿಸಿದರು.

ನಂತರ ಗಂಗೋತ್ರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಕುಮಾರ್‍  ಮಾತನಾಡಿ, ಶಾಲಾ ಹಂತದಲ್ಲಿ ಮತದಾನದ ಪಾತ್ರ ಪ್ರಮುಖವಾಗಿರುತ್ತದೆ. ನೀವು ಶ್ರದ್ಧೆಯಿಂದ ನಿಮಗೆ ವಹಿಸಿರುವ ಜವಾಬ್ದಾರಿಯನ್ನು ನಿಭಾಯಿಸಿ ಹಾಗೂ ನಿಮಗೆ ಗೊತ್ತಿಲ್ಲದ ವಿಚಾರಗಳನ್ನು ಶಿಕ್ಷಕರ ಮಾರ್ಗದರ್ಶನದಲ್ಲಿ ಕಲಿತು ಮುನ್ನಡೆಯಿರಿ ಎಂದು ಶುಭ ಹಾರೈಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: