ಪ್ರಮುಖ ಸುದ್ದಿ

ಮಂಡ್ಯದಿಂದ ಪ್ರತಿದಿನ ಕೆಲಸಕ್ಕೆ ತೆರಳುವ ಮಹಿಳೆಯರಿಗಾಗಿ ವಿಶೇಷ ಬೋಗಿ ಸೇರಿಸಿ : ರೈಲ್ವೆ ಸಚಿವ ಪೀಯೂಶ್ ಗೋಯಲ್ ಬಳಿ ಸುಮಲತಾ ಅಂಬರೀಶ್ ಮನವಿ

ದೇಶ(ನವದೆಹಲಿ)ಜೂ.28:- ಪ್ರತಿದಿನ ಸಾವಿರಾರು ಮಹಿಳೆಯರು ಓಡಾಡುತ್ತಿದ್ದು, ಮಂಡ್ಯದಿಂದ ಪ್ರತಿದಿನ ಕೆಲಸಕ್ಕೆ   ತೆರಳುವ ಮಹಿಳೆಯರಿಗಾಗಿ ವಿಶೇಷ ಬೋಗಿಯನ್ನು ಸೇರಿಸುವಂತೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ರೈಲ್ವೆ ಸಚಿವ ಪೀಯೂಶ್ ಗೋಯಲ್ ಅವರ ಬಳಿ ವಿನಂತಿಸಿದ್ದಾರೆ.

ಬಜೆಟ್‌ಗೂ ಮುನ್ನ ಮಂಡ್ಯ ಸಂಸದೆ ಸುಮಲತಾ ಅಂಬರೀಶ್,  ಕೇಂದ್ರ ರೈಲ್ವೆ ಸಚಿವ ಪೀಯೂಶ್ ಗೋಯಲ್ ಅವರನ್ನು ಭೇಟಿ ಮಾಡಿ   ತಮ್ಮ ಕ್ಷೇತ್ರದ ಹಲವಾರು ಯೋಜನೆಗಳಿಗೆ ಅಗತ್ಯ ನೆರವು ಕೋರಿದ್ದಾರೆ. ಊರಿಂದ ಊರಿಗೆ ಕೆಲಸಕ್ಕಾಗಿ ಓಡಾಡುವ ಮಹಿಳೆಯರಿಗೆ ಅಗತ್ಯ ಭದ್ರತೆಯನ್ನು ರೈಲ್ವೆ ಇಲಾಖೆ ಒದಗಿಸಬೇಕು ಎಂದು ಒತ್ತಾಯಿಸಿದ ಸುಮಲತಾ ಅಂಬರೀಶ್, ಮುಂಬೈ ಮಾದರಿಯಲ್ಲಿ ವಿಶೇಷ ಮಹಿಳಾ ರೈಲುಗಳನ್ನು ಓಡಿಸಬೇಕು. ಮೈಸೂರು-ಮಂಡ್ಯ-ರಾಮನಗರ-ಬೆಂಗಳೂರು ಮಾರ್ಗವಾಗಿ ಸಂಚರಿಸುವ ರೈಲುಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ಮಹಿಳೆಯರಿಗಾಗಿ ವಿಶೇಷ ಬೋಗಿಗಳನ್ನು ಸೇರಿಸುವುದರಿಂದ ಸಾವಿರಾರು ಮಹಿಳೆಯರಿಗೆ ಅನುಕೂಲವಾಗಲಿದೆ ಎಂದು ರೈಲ್ವೆ ಸಚಿವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಕೇಂದ್ರ ರಾಜ್ಯ ಸಚಿವ ಸುರೇಶ್ ಅಂಗಡಿ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: