ಮೈಸೂರು

ನಾಯಕ ಜನಾಂಗದ ವಧು-ವರರ ಮುಖಾಮುಖಿ ಸಂದರ್ಶನ ಕಾರ್ಯಕ್ರಮ : ಮಾರ್ಚ್ 5ರಂದು

ನಾಯಕ ಜನಾಂಗದ ವಧು-ವರರ ಮುಖಾಮುಖಿ ಸಂದರ್ಶನ ಕಾರ್ಯಕ್ರಮವನ್ನು ಮಾರ್ಚ್ 5 ರಂದು ಮಧ‍್ಯಾಹ್ನ 3 ಗಂಟೆಗೆ ನಗರದ ರೋಟರಿ ಸಭಾಂಗಣದಲ್ಲಿ ಹಮ್ಮಿಕೊ‍ಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆಸಕ್ತರು ಫೆ.28 ರೊಳಗೆ ಸಂಘದ ಕಚೇರಿಗೆ ಬಂದು ತಮ್ಮ ಆಯ್ಕೆ ಯಾವ ರೀತಿ ಇರಬೇಕೆಂಬ ಸ್ವ-ವಿವರ ಹಾಗೂ ಭಾವಚಿತ್ರ ಕಳುಹಿಸಿಕೊಡುವಂತೆ ಕೋರಿದರು. ಹೆಚ್ಚಿನ ಮಾಹಿತಿಗಾಗಿ 9740166036, 9448554288 ಗೆ ಸಂಪರ್ಕಿಸಿ ಎಂದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪದಾಧಿಕಾರಿಗಳಾದ ಪ್ರಭಾಕರ್ ಹುಣಸೂರು, ಶ‍್ರೀಧರ್ ಚಾಮುಂಡಿಬೆಟ್ಟ, ರಾಜು ಮಾರ್ಕೆಟ್, ಶಿವಕುಮಾರ್ ಹಾಜರಿದ್ದರು.

Leave a Reply

comments

Related Articles

error: