ಮೈಸೂರು

ಇಪಿಎಫ್ ನಿವೃತ್ತ ನೌಕರರ ಸಭೆ: ಫೆ.14ರಂದು

ಇತ್ತೀಚೆಗೆ ಕೇಂದ್ರ ಸರ್ಕಾರ 20 ವರ್ಷದ ಸೇವೆ ಸಲ್ಲಿಸಿರುವ ಇಪಿಎಫ್ ಸದಸ್ಯರಿಗೆ 2 ವರ್ಷದ ಸರ್ವೀಸ್ ವೆಯ್ಟೇಜ್ ಅನ್ನು ನೀಡಬೇಕೆಂದು ಆದೇಶ ಹೊರಡಿಸಿತ್ತು. ಆದರೆ ರಾಜ್ಯ ಮತ್ತು ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರು ಇದನ್ನು ಪರಿಗಣಿಸದೆ 20 ವರ್ಷ ಸೇವೆಯ ಜೊತೆ 58 ವರ್ಷ ವಯಸ್ಸು ಪೂರೈಸಬೇಕೆಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಇಪಿಎಫ್ ನಿವೃತ್ತ ನೌಕರರ ಒಕ್ಕೂಟದ ಅಧ್ಯಕ್ಷ ಎಸ್.ಪಿ.ನಿಂಗೇಗೌಡ ಆರೋಪಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರಿಗೆ ಕನಿಷ್ಠ ಒಂದು ಸಾವಿರ ಪಿಂಚಣಿ ನೀಡಬೇಕೆಂಬ ಆದೇಶವನ್ನು ಕೂಡ ಪಾಲಿಸುತ್ತಿಲ್ಲ. ಆದ ಕಾರಣ ಈ ಬಗ್ಗೆ ಕಾನೂನು ಹೋರಾಟ ಮುಂದುವರೆಸಲು ರಾಜ್ಯದ ಇಪಿಎಫ್ ನಿವೃತ್ತಿ ಮತ್ತು ಸ್ವಯಂನಿವೃತ್ತಿ ಕಾರ್ಮಿಕರ ಸಭೆಯನ್ನು ಫೆ.14 ರಂದು ಬೆ. 9.30 ಕ್ಕೆ ಹೆಬ್ಬಾಳು 1ನೇ ಹಂತದ ಬಸವನಗುಡಿ ಪಾರ್ಕ್’ನಲ್ಲಿ ಏರ್ಪಡಿಸಲಾಗಿದೆ ಎಂದು ಹೇಳಿದರು.

ಸುದ್ದಿಗೋಷ‍್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಆರ್.ಜಿ. ಮೋಹನ್ ಕೃಷ್ಣ, ವಿ.ಬಸವರಾಜು, ಸಿ.ರಾಜು, ಜಯಣ‍್ಣ ಹಾಜರಿದ್ದರು.

Leave a Reply

comments

Related Articles

error: