ಪ್ರಮುಖ ಸುದ್ದಿ

ಆ್ಯಂಬುಲೆನ್ಸ್​ ಕಳುಹಿಸದ ಕಾರಣ ರಕ್ತಸ್ರಾವವಾಗುತ್ತಿದ್ದ ಗರ್ಭಿಣಿಯನ್ನು ಬೈಕ್ ನಲ್ಲೇ ಕರೆದೊಯ್ದ ಪತಿರಾಯ : ವಿಡಿಯೋ ವೈರಲ್

ದೇಶ(ನವದೆಹಲಿ)ಜೂ.29:-  ಆಸ್ಪತ್ರೆಯವರು ಆ್ಯಂಬುಲೆನ್ಸ್​ ಕಳುಹಿಸದ ಕಾರಣ ತೀವ್ರ ರಕ್ತಸ್ರಾವವಾಗುತ್ತಿದ್ದ ಗರ್ಭಿಣಿಯನ್ನು ಆಕೆಯ ಪತಿಯೇ  ಬೈಕ್​ ಮೇಲೆ ಕೂರಿಸಿಕೊಂಡು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದ ಮನಕಲಕುವ  ಘಟನೆ ಜಾರ್ಖಂಡ್​ನ ಛಂದ್ವಾ ಪ್ರದೇಶದಲ್ಲಿ ನಡೆದಿದೆ.

ಪತಿ ಕಮಲ್​ ಗಂಜು ಅರೆಪ್ರಜ್ಞಾವಸ್ಥೆಯಲ್ಲಿದ್ದ ಗರ್ಭಿಣಿ ಶಾಂತಿದೇವಿಯನ್ನು (30) ಬೈಕ್​ನಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಸಾಗಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ವೈದ್ಯರ ನಿರ್ಲಕ್ಷ್ಯದ ವಿರುದ್ಧ ಭಾರಿ ಟೀಕೆಗಳು ವ್ಯಕ್ತವಾಗಿವೆ. ಛತುಗಾ ಗ್ರಾಮದ ನಿವಾಸಿ ಶಾಂತಿ ನಾಲ್ಕೂವರೆ ತಿಂಗಳ ಗರ್ಭಿಣಿ. ಆಕೆಯನ್ನು ಪತಿ ಕಮಲ್​ ಗಂಜು ಬೈಕ್​ನಲ್ಲಿ ಕೂರಿಸಿಕೊಂಡು ಛಂದ್ವಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ದಾಖಲಿಸಿದ್ದಾರೆ.  ತೀವ್ರ ರಸ್ತಸ್ರಾವವಾಗುತ್ತಿದ್ದುದರಿಂದ ತಕ್ಷಣವೇ ಆಕೆಯನ್ನು ಲಾಟೆಹಾರ್​ ಸದಾರ್​ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದ್ದರು. ಅದೃಷ್ಟವಶಾತ್​ ಈ ಬಾರಿ ಆಸ್ಪತ್ರೆಯವರೇ ಆಂಬುಲೆನ್ಸ್​ ವ್ಯವಸ್ಥೆ ಮಾಡಿ ಅಂದಾಜು 27 ಕಿ.ಮೀ ದೂರದ ಸದಾರ್​ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಪತ್ನಿ ಕಳೆದ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ರಕ್ತಸ್ರಾವ ಕೂಡ ಆಗುತ್ತಿದೆ. ನಾನು 108ಕ್ಕೆ ಕರೆ ಮಾಡಿ ಆಂಬುಲೆನ್ಸ್​ ಕಳುಹಿಸಿಕೊಡುವಂತೆ ಮನವಿ ಮಾಡಿದ್ದೆ  ಅವರು ಕಳುಹಿಸಲಿಲ್ಲ ಎಂದು ಕಮಲ್​ ಗಂಜು ಅಳಲು ತೋಡಿಕೊಂಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: