ದೇಶಪ್ರಮುಖ ಸುದ್ದಿ

ತಮಿಳುನಾಡು ರಾಜ್ಯಪಾಲರ ಬಗ್ಗೆ ಬಿಜೆಪಿ ನಾಯಕನ ಪ್ರಶಂಸೆ: ಕಾಂಗ್ರೆಸ್‍ ಮೇಲೆ ಗೂಬೆ

ಚೆನ್ನೈ: ತಮಿಳುನಾಡು ಪ್ರದೇಶ ಕಾಂಗ್ರೆಸ್‍ ಪಕ್ಷದ ಅಧ್ಯಕ್ಷರಾದ ತಿರುನವುಕ್ಕರಸರ್‍ ಅವರು ಮುಖ್ಯಮಂತ್ರಿ ಆಗಬೇಕೆಂಬ ಆಸೆಯಿಂದ ಎಐಎಡಿಎಂಕೆ ಪಕ್ಷದ ವ್ಯವಹಾರಗಳಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ತಮಿಳುನಾಡು ರಾಜ್ಯ ಬಿಜೆಪಿ ಕಾರ್ಯದರ್ಶಿ ಎಚ್‍.ರಾಜಾ ಆರೋಪಿಸಿದ್ದಾರೆ.

“ತಿರುನವುಕ್ಕರಸರ್ ಅವರಿಗೆ ಮುಖ್ಯಮಂತ್ರಿ ಆಗಬೇಕೆಂಬ ಆಸೆ. ಆದರೆ ಅವರ ಪಕ್ಷಕ್ಕೆ ಗೆಲುವು ಸಾಧ್ಯವಿಲ್ಲ, ಹೀಗಾಗಿ ಎಐಎಡಿಎಂಕೆ ವ್ಯವಹಾರಗಳಲ್ಲಿ ಅವರು ಮೂಗು ತೂರಿಸುತ್ತಿದ್ದಾರೆ” ಎಂದು ಆರೋಪಿಸಿರುವ ರಾಜಾ, ಬಿಜೆಪಿ ಹೀಗೆ ಮಾಡುವುದಿಲ್ಲ” ಎಂದು ತಮ್ಮ ಬೆನ್ನು ತಟ್ಟಿಕೊಂಡಿದ್ದಾರೆ.

ಶಶಿಕಲಾ ಪತಿಗೆ ಎಲ್‍ಟಿಟಿಇ ಬಗ್ಗೆ ಒಲವು !

ಇಷ್ಟೆ ಅಲ್ಲ, ಮುಖ್ಯಮಂತ್ರಿಯಾಗಲು ಹೊರಟಿರುವ ವಿ.ಕೆ.ಶಶಿಕಲಾ ಅವರ ಪತ್ನಿ ನಟರಾಜನ್‍ಗೆ ತಮಿಳು ತೀವ್ರವಾದಿಗಳ ಜೊತೆ ನಿಕಟ ಸಂಪರ್ಕ ಇದೆ. ನಟರಾಜನ್‍ಗೆ ಮತ್ತೆ ಈಳಂ ಸಂಘಟಿಸುವ ಗುಪ್ತ ಇರಾದೆ ಇದೆ ಎಂದು ಆರೋಪಿಸಿರುವ ರಾಜಾ, ಇದು ದೇಶದ ಭದ್ರತೆಗೆ ಮಾರಕ ಎಂದಿದ್ದಾರೆ.

ರಾಜ್ಯಪಾಲರ ಬಗ್ಗೆ ಪ್ರಶಂಸೆ !

ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು ಅತ್ಯಂತ ಜಾಣ್ಮೆಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ರಾಜಾ ಶ್ಲಾಘಿಸಿದ್ದಾರೆ. ತಮಿಳುನಾಡಿನಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿರುವ ಈ ಸಂದರ್ಭ ರಾಜ್ಯಪಾಲರು ಸಮತೋಲನದಿಂದ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಡಿದ್ದಾರೆ.

Leave a Reply

comments

Related Articles

error: