ಮೈಸೂರು

ಕೇಂದ್ರ ಬರ ಅಧ್ಯಯನ ತಂಡದಿಂದ ಮೇವು ವೀಕ್ಷಣೆ : ಅಳಲು ತೋಡಿಕೊಂಡ ರೈತರು

ಜಾನುವಾರುಗಳಿಗೆ ಈಗಲೇ ಮೇವು ಸಿಗುತ್ತಿಲ್ಲ ಇನ್ನು ಎಪ್ರಿಲ್ ಮೇನಲ್ಲಿ ನಮ್ಮ ಜಾನುವಾರುಗಳ ಗತಿಯೇನು  ಎಂದು ರೈತರು ಅಧಿಕಾರಿಗಳ ಬಳಿ ತಮ್ಮ ಅಳಲುತೋಡಿಕೊಂಡಿದ್ದಾರೆ.

ಕೇಂದ್ರದಿಂದ ಬರ ಅಧ್ಯಯನಕ್ಕಾಗಿ ಮೈಸೂರಿಗೆ ಆಗಮಿಸಿದ ಬರ ಅಧ್ಯಯನ ತಂಡ ಮೈಸೂರು ತಾಲೂಕಿನ ಜಯಪುರದಲ್ಲಿ ನಿರ್ಮಿಸಿರುವ ಮೇವಿನ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈಗಾಗಲೇ ಕುಡಿಯುವ ನೀರು ದೊರಕದಂತಾಗಿದೆ. ಹೀಗಿರುವಾಗ ಬೆಳೆಗೆ ಎಲ್ಲಿಂದ ನೀರು ದೊರಕಬೇಕು ಎಂದು ರೈತರು ತಮ್ಮ ನೋವನ್ನು ಅಧಿಕಾರಿಗಳ ಮುಂದಿಟ್ಟರು. ಕೇಂದ್ರದ ಮೂರು ಅಧಿಕಾರಿಗಳ ತಂಡ ರಾಜ್ಯ ಪ್ರವಾಸ ಕೈಗೊಂಡಿದ್ದು, ಕೃಷಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಜಲಜ್ ಶ್ರೀವಾಸ್ತವ್ ನೇತೃತ್ವದ ಅಧಿಕಾರಿಗಳ ತಂಡ ಮೈಸೂರು ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿದ್ದು, ರೈತರ ಕೃಷಿಭೂಮಿ ಪರಿಶೀಲಿಸಿದರಲ್ಲದೇ, ಬೆಳೆಗಳನ್ನು ವೀಕ್ಷಿಸಿದರು. ನೀರು ಯಾವ ರೀತಿ ಪೂರೈಕೆಯಾಗುತ್ತಿದೆ. ಅಂತರ್ಜಲ ಮಟ್ಟ ಹೇಗಿದೆ ಎಂಬುದನ್ನು ತಿಳಿದುಕೊಂಡರು. ಜಯಪುರದಲ್ಲಿ ನಿರ್ಮಿಸಿರುವ ಮೇವು ಬ್ಯಾಂಕ್‍ಗೆ ಭೇಟಿ ನೀಡಿ, ಮೇವಿನ ಕೊರತೆ, ಹಾಗೂ ವಿತರಣೆಯನ್ನು ಪ್ರತ್ಯಕ್ಷವಾಗಿ ನೋಡಿದರು. ರೈತರು ತಮಗಾಗುತ್ತಿರುವ ತೊಂದರೆಯನ್ನು ಅಧಿಕಾರಿಗಳಿಗೆ ವಿವರಿಸಿದರು.

ಈ ಸಂದರ್ಭ ಜಿಲ್ಲಾಧಿಕಾರಿ ಡಿ.ರಂದೀಪ್,ಆಯೋಗದ ಸಂಶೋಧನಾ ಅಧಿಕಾರಿ ಅನುರಾಧ, ಕೇಂದ್ರ ನೀರು ಆಯೋಗದ ಅಧೀಕ್ಷಕ ಇಂಜಿನಿಯರ್ ಮೋಹನ್ ಮುರಳಿ,ಹಣಕಾಸು ಸಚಿವಾಲಯದ ನಿರ್ದೇಶಕ ಸಚ್ಚಿದೇವ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: