ಮೈಸೂರು

  ಮನೆ ಕಳ್ಳತನ ಆರೋಪಿಯ ಬಂಧನ :   40 ಗ್ರಾಂ ತೂಕದ ಚಿನ್ನದ ಸರ ವಶ

ಮೈಸೂರು,ಜೂ.30:- ಮೈಸೂರು ನಗರ ನರಸಿಂಹರಾಜ ಠಾಣಾ ಪೊಲೀಸರು ಮಾಹಿತಿ ಮೇರೆಗೆ  26.06.2019 ರಂದು ಆಯುರ್ವೇದಿಕ್ ಸರ್ಕಲ್‍ನಲ್ಲಿ ಕಾರ್ಯಾಚರಣೆ ನಡೆಸಿ ಮನೆ ಕಳ್ಳತನ ನಡೆಸುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.

ಬಂಧಿತನ್ನು  ರವಿಕುಮಾರ್ ಬಿನ್ ಕಾಳಮರಿಯಯ್ಯ, (40), ಗೊಲ್ಲನಬೀಡು ಗ್ರಾಮ, ಹಂಪಾಪುರ ಹೋಬಳಿ, ಹೆಚ್.ಡಿ ಕೋಟೆ ತಾಲೂಕು, ಮೈಸೂರು ಜಿಲ್ಲೆ ಎಂದು ಗುರುತಿಸಲಾಗಿದೆ. ಈತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ ಈತ, ನರಸಿಂಹರಾಜ ಠಾಣಾ ವ್ಯಾಪ್ತಿಯ ತನ್ನ ಸಂಬಂಧಿಯ ಮನೆಯಲ್ಲಿ ನಕಲಿ ಕೀ ಬಳಸಿ ಬೀರುವಿನಲ್ಲಿ ಇಟ್ಟಿದ್ದ ಚಿನ್ನದ ಸರವನ್ನು ಕಳ್ಳತನ ಮಾಡಿದ್ದ ಬಗ್ಗೆ ತಿಳಿಸಿದ್ದರ ಮೇರೆಗೆ  ರೂ.1 ಲಕ್ಷ ಮೌಲ್ಯದ 40 ಗ್ರಾಂ ತೂಕದ ಎರಡು ಎಳೆಯ ಚಿನ್ನದ ಸರವನ್ನು ವಶ ಪಡಿಸಿಕೊಂಡಿರುತ್ತಾರೆ.

ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ (ಕಾ ಮತ್ತು ಸು)   ಮುತ್ತುರಾಜು. ಎಂ. ಮಾರ್ಗದರ್ಶನದಲ್ಲಿ ನರಸಿಂಹರಾಜ ವಿಭಾಗದ ಎಸಿಪಿ ರವರಾದ ಗೋಪಾಲ್ ರವರ ನೇತೃತ್ವದಲ್ಲಿ ಎನ್.ಆರ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಬಿ.ಬಸವರಾಜು, ಪಿಎಸ್‍ಐ ಆನಂದ್ ಸಿಬ್ಬಂದಿಗಳಾದ ರಮೇಶ, ಮಂಜುನಾಥ, ಕೃಷ್ಣ  ಮಾಡಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: