ಪ್ರಮುಖ ಸುದ್ದಿಮೈಸೂರು

ರೈತರು ಕೊಟ್ಟ ತೆರಿಗೆ ಹಣವನ್ನು ರಾಜ್ಯ ಸರ್ಕಾರ ಕೊಳ್ಳೆ ಹೊಡೆದಿದೆ : ಬಿಎಸ್ ವೈ ಆರೋಪ

ರೈತರು ಕೊಟ್ಟ ತೆರಿಗೆ ಹಣವನ್ನು ರಾಜ್ಯ ಸರ್ಕಾರ ಕೊಳ್ಳೆ ಹೊಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.

ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪಾಲ್ಗೊಂಡು ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಗೋವಿಂದ ರಾಜ್ ಮೂಲಕ ಸಿಎಂ ಕೇಂದ್ರದ ಕಾಂಗ್ರೆಸ್ ನಾಯಕರಿಗೆ ಒಂದು ಸಾವಿರ ಕೋಟಿ ರೂ. ಕಿಕ್ ಬ್ಯಾಕ್ ತಲುಪಿಸಿದ್ದಾರೆ. ಗೋವಿಂದರಾಜ್ ಮನೆಯಲ್ಲಿ ಯಾರಿಗೆ ಎಷ್ಟು ಹಣ ತಲುಪಿದೆಎಂಬ ಬಗ್ಗೆ ಡೈರಿಯಲ್ಲಿ ಉಲ್ಲೇಖವಾಗಿದೆ. ದಾಖಲೆ ಇದ್ದರೆ ತೋರಿಸಿ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಏನನ್ನು ತೋರಿಸೋದು ಎಂದು ಪ್ರಶ್ನಿಸಿದರು.

ನಿಮ್ಮ ಹಗರಣಗಳ ಪಟ್ಟಿಯನ್ನು ಬಿಚ್ಚಿಡುತ್ತೇನೆ. ನಾಚಿಕೆ ಆಗಬೇಕು ನಿಮ್ ಆಡಳಿತ ವೈಖರಿಗೆ  ಹದಿನೆಂಟುವರೆ ಕೋಟಿ ರೂ. ಸಣ್ಣ ನೀರಾವರಿ ಇಲಾಖೆಯಲ್ಲಿ ಹಗರಣ ಆಗಿದ್ದರೂ ಪುಣ್ಯಾತ್ಮ ಕ್ರಮ ತಗೊಂಡಿಲ್ಲ. ನಾಳೆ ಬೆಂಗಳೂರಲ್ಲಿ ಇನ್ನೊಂದು ಬಾಂಬ್ ಸಿಡಿಸುತ್ತೇನೆ ಎಂದರು. ಪ್ರಧಾನಿಮೋದಿ ಅಥವಾ ನಾನು ಸಿಎಂ ಆಗಿದ್ದ ಅವಧಿಯಲ್ಲಿ ಮುಸ್ಲಿಮರಿಗೆ ಅನ್ಯಾಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು, ಸುತ್ತೂರು ಶ್ರೀಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Reply

comments

Related Articles

error: