ಕ್ರೀಡೆದೇಶ

ಭಾರತದ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ್ದೆ ಕೇಸರಿ ಜರ್ಸಿ: ಮೆಹಬೂಬಾ ಮುಫ್ತಿ

ನವದೆಹಲಿ,ಜು.1-ಭಾರತದ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ್ದೆ ಕೇಸರಿ ಜರ್ಸಿ ಎಂದು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿರುವ ಮುಫ್ತಿ, ಭಾರತದ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ್ದೆ ಕೇಸರಿ ಜರ್ಸಿ. ನಾನು ಮೂಢ ನಂಬಿಕೆಗಳನ್ನು ನಂಬುತ್ತೇನೆಂದು ಕರೆದರೂ ಪರವಾಗಿಲ್ಲ ಭಾರತದ ಗೆಲುವಿನ ಓಟವನ್ನು ತಡೆದದ್ದೆ ಟೀಂ ಇಂಡಿಯಾ ಧರಿಸಿದ್ದ ಕೇಸರಿ ಸರ್ಜಿ ಎಂದು ಹೇಳಿದ್ದಾರೆ.

ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಭಾನುವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಭಾರತ ವಿರುದ್ಧ 31 ರನ್ ಅಂತರದ ರೋಚಕ ಗೆಲುವು ದಾಖಲಿಸಿರುವ ಆತಿಥೇಯ ಇಂಗ್ಲೆಂಡ್ ಸೆಮಿಫೈನಲ್ ಕನಸನ್ನು ಜೀವಂತವಾಗಿರಿಸಿದೆ. ಈ ಮೂಲಕ 1992ರ ಬಳಿಕ ಭಾರತ ವಿರುದ್ಧ ವಿಶ್ವಕಪ್‌ನಲ್ಲಿ ಮೊದಲ ಗೆಲುವನ್ನು ದಾಖಲಿಸಿದೆ. (ಎಂ.ಎನ್)

Leave a Reply

comments

Related Articles

error: