ಮೈಸೂರು

ವಿಶೇಷ ಮಕ್ಕಳ ಶಾಲೆಯಲ್ಲಿ ಮಕ್ಕಳ ಜೊತೆ ಜನ್ಮದಿನ ಆಚರಿಸಿಕೊಂಡ ಮಾಜಿ ಡಿಸಿಎಂ ಆರ್.ಅಶೋಕ್

ಮೈಸೂರು,ಜು.1:- ಇಂದು ಬೆಳಿಗ್ಗೆ ಮಾಜಿ ಉಪಮುಖ್ಯಮಂತ್ರಿ, ಹಾಲಿ ಶಾಸಕ ಆರ್ ಅಶೋಕ್, ಅವರ ಹುಟ್ಟು ಹಬ್ಬವನ್ನು ಚಾಮುಂಡಿಪುರಂ 6 ನೇ ಕ್ರಾಸ್ ನಲ್ಲಿರುವ ಅರುಣೋದಯ ವಿಶೇಷ ಮಕ್ಕಳ ಶಾಲೆಯಲ್ಲಿ ಮಕ್ಕಳಿಗೆ ಹೊದಿಕೆ ನೀಡಿ, ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.

ಆರ್ ಅಶೋಕ್ ಅವರು ಮಕ್ಕಳಿಗೆ ಕೇಕ್ ತಿನ್ನಿಸಿದರು.

ಈ ಸಂದರ್ಭದಲ್ಲಿ ನಗರ ಪಾಲಿಕೆ ಸದಸ್ಯರಾದ ಮಾ. ವಿ ರಾಮಪ್ರಸಾದ್, ಸತೀಶ್, ಬಿಜೆಪಿ ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ಎಚ್ ವಿ ರಾಜೀವ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ರಾಜೇಂದ್ರ, ಮುಖಂಡರಾದ ಸಂದೀಪ್, ಸೋಮೇಶ್, ಭಾನುಪ್ರಕಾಶ್, ಸ್ವಾಮಿ, ಧರ್ಮು, ಶಿವಕುಮಾರ್, ಅದ್ವೈತ್, ಶ್ರೀಧರ್, ಶ್ರೀಕಂಠ, ಮಧು, ಧರ್ಮೇಂದ್ರ, ಮಂಜುನಾಥ್, ಜಗದೀಶ್, ಪುನೀತ್, ಭಾಸ್ಕರ್ ಹಾಗೂ ಅರುಣೋದಯ ಶಾಲೆ ಸಿಬ್ಬಂದಿ ವರ್ಗ ಮುಂತಾದವರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: