ಸುದ್ದಿ ಸಂಕ್ಷಿಪ್ತ

ಜು.4 : ಉಚಿತ ಸ್ತನ ಕ್ಯಾನ್ಸರ್ ತಪಾಸಣೆ ಶಿಬಿರ

ಮೈಸೂರು,ಜು.1:-  “ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ (FPA INDIA)  ಮೈಸೂರು ಹಾಗೂ ನಾರಾಯಣ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಇವರ ಸಹಯೋಗದೊಂದಿಗೆ ಉಚಿತ ಸ್ತನ ಕ್ಯಾನ್ಸರ್ ತಪಾಸಣೆ ಶಿಬಿರವನ್ನು   04/06/2019 ರ ಗುರುವಾರದಂದು ಬೆಳಿಗ್ಗೆ 10 ಗಂಟೆಯಿಂದ  ಸಂಜೆ 2ರ ವರೆಗೆ “ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್  ಆಫ್ ಇಂಡಿಯಾ (FPA INDIA)  3ನೇ ಕ್ರಾಸ್, ಮಾರುತಿ ವೃತ್ತ, ಎನ್. ಆರ್. ಮೊಹಲ್ಲಾ  ಮೈಸೂರು ಇಲ್ಲಿ ಆಯೋಜಿಸಲಾಗಿದೆ.

ಸ್ತನ ಭಾಗದಲ್ಲಿ ಅಥವಾ ಕಂಕುಳಿನ ಭಾಗದಲ್ಲಿ ಗಟ್ಟಿಯಾಗುವಿಕೆ ಅಥವಾ ಗಂಟು ಇದ್ದರೆ, ಸ್ತನದ ಆಕಾರದಲ್ಲಿ ಅಥವಾ ಗಾತ್ರದಲ್ಲಿ ಬದಲಾವಣೆ ಕಂಡುಬಂದರೆ, ಸ್ತನದ ಚರ್ಮದಲ್ಲಿ ಸುಕ್ಕುಬೀಳುವಿಕೆ, ಸ್ತನ ತೊಟ್ಟಿನಲ್ಲಿ ಸ್ತನದ ಮೇಲೆ ಕೆಂಪು ಗೆರೆಗಳು ಅಥವಾ ಊತ ಕಂಡುಬಂದರೆ , ಸ್ತನ ಭಾಗದಲ್ಲಿ ಕಿತ್ತಲೆ ಬಣ್ಣದ ಸುಕ್ಕಿನ ಚರ್ಮದಂತೆ ಕುಳಿ ಬಂದರೆ  ಇತ್ಯಾದಿ ತಪಾಸಣೆ ನಡೆಸಲಾಗುತ್ತಿದ್ದು, ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದೆಂದು ಕೋರಲಾಗಿದೆ. ಮೆಮೋಗ್ರಾಫಿಯನ್ನು ಸಹ ಉಚಿತವಾಗಿ ಮಾಡಿ ಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ  8762850960/ 9916280590 ಸಂಪರ್ಕಿಸಬಹುದು. (ಎಸ್.ಎಚ್)

Leave a Reply

comments

Related Articles

error: