ಮೈಸೂರು

ರೌಡಿಶೀಟರ್ ಅಶೋಕ್ ಪೈ ಬಂಧನ

ಹಣ ಬದಲಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿ ಶೀಟರ್ ಅಶೋಕ್ ಪೈಯನ್ನು ಮಂಡ್ಯ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಇತ್ತೀಚೆಗಷ್ಟೇ ಮಂಡ್ಯದ ಮದ್ದೂರು ತಾಲ್ಲೂಕಿನ ಮಾದರಹಳ್ಳಿಯಲ್ಲಿ  ಪತ್ನಿಯ ಮನೆಯಲ್ಲಿದ್ದಾಗ ಅಶೋಕ್ ಪೈ ಹತ್ಯೆಗೆ ಯತ್ನ ನಡೆದಿತ್ತು. ಸುಮಾರು 30 ಜನರ ತಂಡ ಅಶೋಕ್ ಪೈ ಮೇಲೆ ದಾಳಿ ನಡೆಸಿದ್ದರು. ಈ ಬಗ್ಗೆ ಅಶೋಕ್ ಪೈ ಕೆ.ಎಂ ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ ಎನ್ನಲಾಗಿದೆ.  ಪೈ ದಾಳಿಗೆ ಸಂಬಂಧಿಸಿದಂತೆ 11 ಜನರನ್ನು ಪೊಲೀಸರು ಬಂಧಿಸಿದ್ದರು. ಬಂಧಿತರನ್ನು ವಿಚಾರಣೆ ನಡೆಸಿದಾಗ ಹಣ ಬದಲಾವಣೆ ಮಾಹಿತಿ ಬಹಿರಂಗವಾಗಿದೆ. ಅಶೋಕ್ ಪೈ ಹಣ ಪಡೆದು ಮೋಸ ಮಾಡಿದ್ದ, ಹಾಗಾಗಿ ಪೈ ಮೇಲೆ ದಾಳಿ ಮಾಡಲು ಮುಂದಾಗಿದ್ದೆವು ಎಂದು ಬಂಧಿತರು ಮಾಹಿತಿ ನೀಡಿದ್ದಾರೆ. ಹಣ ಬದಲಾವಣೆ ವಿಚಾರವಾಗಿ ಅಶೋಕ್ ಪೈ ವಿರುದ್ಧ ಪ್ರಕರಣ ದಾಖಲಾಗಿದ್ದು, ಮಂಡ್ಯ ಗ್ರಾಮಾಂತರ ಪೊಲೀಸರು ಪೈಯನ್ನ ಬಂಧಿಸಿದ್ದಾರೆ.

Leave a Reply

comments

Related Articles

error: