ಮೈಸೂರು

ಸರ್ಕಾರಿ  ವೃತ್ತಿ  ಜೀವನದಿಂದ ನಿವೃತ್ತಿಯನ್ನು ಹೊಂದುತ್ತಿರುವ  ಕೆ.ರಮೇಶ್ ಅಡಿಗರವರಿಗೆ ಬೀಳ್ಕೊಡುಗೆ

ಮೈಸೂರು,ಜು.1:- ಇಂದು ಶ್ರೀ ಮಹಾರಾಜ ಸಂಸ್ಕೃತ ಮಹಾಪಾಠ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಸತತವಾಗಿ ಇಪ್ಪತ್ತೈದು  ವರ್ಷಗಳು ಕೃಷ್ಣ ಯಜುರ್ವೇದ  ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ತಮ್ಮ ಸರ್ಕಾರಿ  ವೃತ್ತಿ  ಜೀವನದಿಂದ ನಿವೃತ್ತಿಯನ್ನು ಹೊಂದುತ್ತಿರುವ    ಕೆ.ರಮೇಶ್ ಅಡಿಗರವರಿಗೆ ಮಹಾರಾಜ ಸಂಸ್ಕೃತ ಪಾಠ ಶಾಲೆ ಅಧ್ಯಾಪಕ ವೃಂದದಿಂದ ಹಾಗೂ ವಿದ್ಯಾರ್ಥಿ  ವೃಂದದಿಂದ ಅವರಿಗೆ    ಅಭಿನಂದನೆ ಸಲ್ಲಿಸಿ ಬೀಳ್ಕೊಡಲಾಯಿತು.

ಸಮಾರಂಭದಲ್ಲಿ ಪಾಠ ಶಾಲೆಯ ಪ್ರಾಂಶುಪಾಲರಾದ  ಮಹದೇವಸ್ವಾಮಿ ಅವರು ಹಾಗೂ ನಿವೃತ್ತ ಪ್ರಾಧ್ಯಾಪಕರಾದ  ನಾರಾಯಣ ಅಡಿಗ ಅವರು  ಅಧ್ಯಾಪಕ ಸಂಘ ಸಂಘದ ಅಧ್ಯಕ್ಷರಾದ ಆಳ್ವಾರ್,   ಚಕ್ರವರ್ತಿ ರಾಮಚಂದ್ರ ಹಾಗೂ ಸತ್ಯನಾರಾಯಣ,  ಹಿರಿಯ ವಿದ್ಯಾರ್ಥಿಗಳಾದ  ಎಲ್ ರಾಜಗೋಪಾಲ್,  ಸುರೇಶ್  ಹೆಗಡೆಯವರು ಸಮಾರಂಭದಲ್ಲಿ ಹಾಜರಿದ್ದರು. (ಎಸ್.ಎಚ್)

Leave a Reply

comments

Related Articles

error: