ಮೈಸೂರು

ಆಷಾಢ ಮಾಸದ ಅಂಗವಾಗಿ ಆದಿಶಕ್ತಿ ಚಾಮುಂಡೇಶ್ವರಿಯ ದೇವಸ್ಥಾನದ ಪರಿಸರದ ಸುತ್ತಮುತ್ತ ಇರುವ ಮಂಟಪಕ್ಕೆ ಸುಣ್ಣಬಣ್ಣ

ಮೈಸೂರು,ಜು.2:- ಚಾಮುಂಡಿ ಬೆಟ್ಟದ ತಪ್ಪಲಿನ ತಂಗುದಾಣಗಳಿಗೆ ಸುಣ್ಣ ಬಣ್ಣ  ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ತಂಗುದಾಣಗಳ ಸೂಕ್ತ ನಿರ್ವಹಣೆ ಮಾಡುವ ಅಗತ್ಯಯನ್ನು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಡುವ ಸಲುವಾಗಿ ಇಂದು ಬೆಳಿಗ್ಗೆ ಪರಿಸರ ತಂಡದ ವತಿಯಿಂದ ತಂಗುದಾಣಗಳನ್ನು ಶುಚಿಗೊಳಿಸಿ ಸುಣ್ಣ ಬಣ್ಣ ಬಳಿಯಲಾಯಿತು.

ಆಷಾಢ ಶುಕ್ರವಾರಗಳಲ್ಲಿ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಿ ದರ್ಶನ ಪಡೆಯಲು ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ಆಗಮಿಸುತ್ತಾರೆ .ಈ ಪೈಕಿ ಸಾವಿರಾರು ಮಂದಿ ಮೆಟ್ಟಿಲುಗಳ ಮೂಲಕ ದೇವರ ದರ್ಶನ ಪಡೆಯುತ್ತಾರೆ .ಇವರು ಚಾಮುಂಡಿ ಬೆಟ್ಟದ ಪಾದದಿಂದ ಮೆಟ್ಟಿಲು ಏರಲು  ಆರಂಭಿಸುತ್ತಿದ್ದಂತೆ ಬಹಳ ಹಿಂದೆ ರಾಜರು ಕಟ್ಟಿಸಿದ ತಂಗುದಾಣಗಳು ಎದುರಾಗುತ್ತವೆ .ಇದೀಗ ಇವುಗಳು ಪುಂಡ ಪೋಕರಿಗಳ ತಾಣವಾಗಿರುವುದಲ್ಲದೇ, ತಂಗುದಾಣದ ಗೋಡೆಗಳ ಮೇಲೆ ಮಸಿಯಿಂದ ಹೆಸರುಗಳನ್ನು ಬರೆದಿರುವುದು ಸೇರಿದಂತೆ ವಿಕೃತವಾಗಿ ಚಿತ್ರಗಳನ್ನು ಬಿಡಿಸಿರುವ ದೃಶ್ಯ ಎದುರಾಗುತ್ತದೆ. ದೇವರ ದರ್ಶನಕ್ಕೆಂದು ಧಾರ್ಮಿಕ ಭಾವನೆಯಿಂದ ಆಗಮಿಸಿದವರು ಈ ವಿಕೃತ ವನ್ನು ನೋಡಿ ಮುಜುಗರಕ್ಕೆ ಒಳಗಾಗುತ್ತಾರೆ .ಚಾಮುಂಡಿ ಬೆಟ್ಟವನ್ನು ಮೆಟ್ಟಿಲಿನಿಂದ ಏರುವಾಗ ತಂಗುದಾಣಗಳ ದುಸ್ಥಿತಿ ಕಣ್ಣಿಗೆ ಬಿತ್ತು .ಹಾಗಾಗಿ ಅದನ್ನು ಅಳಿಸಿ ಹಾಕಲು ಸುಣ್ಣ ಬಳಿಯಲು ತೀರ್ಮಾನಿಸಲಾಯಿತು. ಐತಿಹಾಸಿಕವಾಗಿ ಪ್ರಸಿದ್ಧವಾದ ಈ ಗೋಪುರಗಳಿಗೆ ರಕ್ಷಣೆ ನೀಡಿ ಸೂಕ್ತ ರೀತಿಯಲ್ಲಿ ಸಂರಕ್ಷಣೆ ಮಾಡುವಂತೆ ಜಿಲ್ಲಾಡಳಿತ ಗಮನ ಸೆಳೆಯಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪರಿಸರ ತಂಡದ ಅಧ್ಯಕ್ಷ ಲೋಹಿತ್ ತಿಳಿಸಿದರು.

ತಂಗು ದಾಣಕ್ಕೆ ರಕ್ಷಣೆ ನೀಡಿ ಹಿಂದೆ ರಾಜ ಮಹಾರಾಜರು. ಬೆಟ್ಟವನ್ನು ಹತ್ತಿ ಇಳಿಯುವವರು ವಿಶ್ರಾಂತಿ ಪಡೆಯಲು ಹಾಗೂ ದಣಿದು ಬಂದವರಿಗೆ ಪಾನಕ ಸೇರಿದಂತೆ ಇನ್ನಿತರ ತಂಪು ಪಾನೀಯ ವಿತರಿಸಲು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ 15 ತಂಗುದಾಣಗಳನ್ನು ನಿರ್ಮಿಸಿದ್ದರು. ಈಗ ಪುಂಡ ಪೋಕರಿಗಳ ತಾಣವಾಗಿದೆ . ಅಲ್ಲದೆ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿ ಪರಿಣಮಿಸಿದೆ.   ಪಾನಕ ಸೇರಿದಂತೆ ಇನ್ನಿತರ ಪಾನೀಯಗಳನ್ನು ವಿತರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ತಂಗುದಾಣಗಳಿಗೆ ರಕ್ಷಣೆ ನೀಡಿ ಉತ್ತಮ ವಾತಾವರಣ ನಿರ್ಮಾಣವಾಗುವಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಇದಲ್ಲದೆ ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕ ಹತ್ತಿ ಬರುವ ಭಕ್ತಾದಿಗಳನ್ನು ಗಮನದಲ್ಲಿಟ್ಟುಕೊಂಡು ಮೆಟ್ಟಿಲು ಮಾರ್ಗದಲ್ಲಿ ನೇರವಾಗಿ ದೇವರ ದರ್ಶನದ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.

ಮಾಜಿ  ಮೇಯರ್ ಸಂದೇಶ್ ಸ್ವಾಮಿ ಮಾತನಾಡಿ   ಪಾರಂಪರಿಕ  ಪ್ರಸಿದ್ಧಿ ಪಡೆದಿರುವ ನಗರಗಳಲ್ಲಿ   ಮೈಸೂರು ಎತ್ತರ ಸ್ಥಾನ ಗಳಿಸಿದೆ. ರಾಜಸ್ಥಾನವನ್ನು ಪಿಂಕ್ ಸಿಟಿ ಎಂದು ಕರೆಯುತ್ತಾರೆ ಅದೇ ರೀತಿ ನಮ್ಮ ಮೈಸೂರು ನಗರವನ್ನು ಹೆರಿಟೇಜ್ ಸಿಟಿ ಎಂದು ಕರೆಯುತ್ತಾರೆ. ಹಾಗಾಗಿ ನಮ್ಮ ಮೈಸೂರು ನಗರವನ್ನು hi very   ಕಲರ್ ಸಿಟಿ ಎಂದು ಕರೆಯಲು ರೆಸಲ್ಯೂಷನ್   ಪಾಸ್ ಆಗಿರುವುದು ಸ್ವಾಗತಾರ್ಹ.  ಪರಿಸರ ಸ್ನೇಹಿ ತಂಡದವರು ಈ ಕಾರ್ಯ ಶ್ಲಾಘನೀಯ ಎಂದರು.

ಬಿಜೆಪಿ ಮುಖಂಡ  ಜೋಗಿ ಮಂಜು  ಮಾತನಾಡಿ ಮೈಸೂರು ನಗರ ಭಾರತದಲ್ಲಿ ಸ್ವಚ್ಛ ನಗರ. ಸ್ವಚ್ಛ ನಗರವನ್ನು ಎಷ್ಟು ಸಾಧ್ಯವೋ ಅಷ್ಟು ಸ್ವಚ್ಛವಾಗಿಡಲು ನಮ್ಮ ಪರಿಸರ ತಂಡ ಶ್ರಮಿಸುತ್ತಿದೆ.   ಗೋಡೆಗಳ ಮೇಲೆ ಬರೆದಿರುವ ಪ್ರೇಮ ಪ್ರಸಂಗಗಳನ್ನು ಹಾಗೂ ಅಶ್ಲೀಲ ಪದಗಳನ್ನು ಅಳಿಸುವ ಕಾರ್ಯ ಜೋರಾಗಿ ಸಾಗುತ್ತಿದೆ. ಪರಿಸರ ಸ್ನೇಹಿ ತಂಡದ ಸದಸ್ಯರು ಹಾಗೂ ಸ್ನೇಹ ಬಳಗದವರ ಕಾರ್ಯ ಶ್ಲಾಘಿಸುವಂಥದ್ದು ಎಂದರು.

ಬಿಜೆಪಿ ಯುವ ಮುಖಂಡ    ಮಧು ಎನ್ ಪೂಜಾರ ಮಾತನಾಡಿ ತಾಯಿ ಚಾಮುಂಡೇಶ್ವರಿ ಬೆಟ್ಟ ಒಂದು ದೈವಿಕ ಸ್ಥಳ. ಈ ಸ್ಥಳದಲ್ಲಿ ತಾಯಿ ನೆಲೆಸಿದ್ದಾಳೆ.  ಅನ್ಯ ಸ್ಥಳದಲ್ಲಿ ಮಾಡಿರುವ ಪಾಪ ಪುಣ್ಯ ಸ್ಥಳಗಳಲ್ಲಿ ನಾಶವಾಗುತ್ತೆ.     ಪುಣ್ಯ ಸ್ಥಳಗಳಲ್ಲಿ ಮಾಡಿರುವಂತ ಪಾಪ ಎಂದೆಂದಿಗೂ ನಾಶವಾಗುವುದಿಲ್ಲ. ನೀವು ಮಾಡಿರುವುದು ಪಾಪದ ಕೆಲಸ.  ದಯಮಾಡಿ  ಈ ತರಹ  ಕೆಲಸವನ್ನು ಮಾಡಬೇಡಿ.     ಮೈಸೂರು ನಗರವನ್ನು ಸ್ವಚ್ಛವಾಗಿಡಲು ದಯವಿಟ್ಟು ಮೈಸೂರು ನಗರದ ಜನತೆ ಶ್ರಮಿಸಬೇಕೆಂದು ಕೇಳಿಕೊಂಡರು.

ಈ ಸಂದರ್ಭದಲ್ಲಿ ನಗರದ ಮುಖಂಡರಾದ ಚೇತನ್ ಮಂಜುನಾಥ್ , ಅಶೋಕ್ ಬಸವರಾಜ್ ,ಜೀವನ್, ಸುರೇಂದ್ರ, ನವೀನ್ ,ಪ್ರಮೋದ್ ,ರಾಜು,ಸೂರ್ಯ, ಚಿರಾಗ್ , ಹಾಗೂ ಪರಿಸರ ಸ್ನೇಹಿ ತಂಡದ 30ಕೂ ಹೆಚ್ಚು ಯುವಕರು   ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: