ಮೈಸೂರು

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಸಚಿವ ಜಿ.ಟಿ.ದೇವೇಗೌಡ 

ಮೈಸೂರು,ಜು.2-ಮೈಸೂರು-ಬನ್ನೂರು ರಸ್ತೆಯ ಡೈರಿ ವೃತ್ತದಿಂದ ಕುರುಬಾರಹಳ್ಳಿ ವೃತ್ತದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಜಿ.ಟಿ.ದೇವೇಗೌಡ ಇಂದು ಗುದ್ದಲಿ ಪೂಜೆ ನೆರವೇರಿಸಿದರು.

ಸುಮಾರು 399 ಲಕ್ಷ ರೂ. ವೆಚ್ಚದ ಕಾಮಗಾರಿಯಲ್ಲಿ 975 ಮೀಟರ್ ರಸ್ತೆ ಅಗಲೀಕರಣ ಮಾಡಿ (4 ಪಥದ ರಸ್ತೆ) ಡಾಂಬರೀಕರಣ ಮಾಡುವುದು. 250 ಎಂ.ಎಂ. ದಪ್ಪದ ವೆಟ್ ಮಿಕ್ಸ್ ಮೆಕ್ಯಾಡಮ್ ಹಾಕುವುದು. 50 ಎಂ.ಎಂ. ದಪ್ಪದ ಬಿಟ್ಯುಮಿನ್ ಮೆಕ್ಯಾಡಮ್ ಹಾಕುವುದು. 25 ಎಂ.ಎಂ. ದಪ್ಪದ ಎಸ್.ಡಿ.ಬಿ.ಸಿ ಹಾಕುವುದು. ರಸ್ತೆ ಬದಿ ಕಾಂಕ್ರಿಟ್ ಚರಂಡಿ ನಿರ್ಮಾಣ ಮತ್ತು ತಡೆಗೋಡೆ ನಿರ್ಮಾಣ. ಸೇತುವೆ ಅಗಲೀಕರಣ. ರಸ್ತೆ ಫುಟ್ ಪಾತ್ ಗೆ ಇಂಟರ್ ಲಾಕ್ ಅಳವಡಿಸುವುದು ಸೇರಿದೆ.

ಈ ಸಂದರ್ಭದಲ್ಲಿ ಶಾಸಕರಾದ ತನ್ವೀರ್ ಸೇಠ್, ರಾಮದಾಸ್, ಎಲ್.ನಾಗೇಂದ್ರ, ಮೇಯರ್ ಪುಷ್ಪಲತಾ ಜಗನ್ನಾಥ್, ನಗರಪಾಲಿಕೆ ಸದಸ್ಯರಾದ ರೂಪಾ ಯೋಗೇಶ್, ಬಿ.ವಿ.ಮಂಜುನಾಥ್, ಬಿಜೆಪಿ ಮುಖಂಡ ಬಿ.ಪಿ.ಮಂಜುನಾಥ್ ಇತರರು ಉಪಸ್ಥಿತರಿದ್ದರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: