ಮೈಸೂರು

ಸೂಫಿ ಗೀತೆಗಳ ಸೊನೆ ಮಳೆ ಸುರಿಸಿದ ಕಾಲೂರಾಮ್ ಬಮಾನಿಯ ಮತ್ತು ತಂಡ

ಕಬೀರದಾಸರ ಸೂಫಿ ಗೀತೆಗಳ ಮೂಲಕ ಪ್ರೇಕ್ಷಕರ ಹೃದಯಂಗಳದಲ್ಲಿ ನೃತ್ಯ ಮಾಡಿ, ಗೀತಾಮೃತದ ಸೊನೆ ಮಳೆಗರೆದಿದ್ದು ಮಧ್ಯ ಪ್ರದೇಶದ ಸೂಫಿ ಗಾಯಕ ಕಾಲೂರಾಮ್ ಬಮಾನಿಯಾ ಅವರ ಗಾಯನ. ರಂಗಾಯಣದ ವನರಂಗದಲ್ಲಿ ನೆರೆದಿದ್ದ ಪ್ರೇಕ್ಷಕ ಮನಸ್ಸುಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.
ಶನಿವಾರ ಜರುಗಿದ ನಿರಂತರ ಫೌಂಡೇಷನ್ ವತಿಯಿಂದ ಆಯೋಜಿಸಿರುವ ನಿರಂತರ ರಂಗ ಉತ್ಸವದ ಸಮಾರೋಪ ಸಮಾರಂಭದಲ್ಲಿ ನಡೆದ ಸೂಫಿ ಗಾಯನವು ಸಂಗೀತ ಪ್ರಿಯರನ್ನು ಮಂತ್ರಮುಗ್ಧಗೊಳಿಸಿ ಹೃದಯಾಂತರಾಳದಲ್ಲಿ ತಾಳ ಹಾಕಿಸಿತು. ಹಾಡುಗಳೊಂದಿಗೆ ಹಾಡಿನ, ವಚನದ ಹಿನ್ನೋಟ, ಮುನ್ನೋಟದ ಪರಿಚಯ ಹಾಗೂ ವಿವರಣೆ ನೀಡುವುದು ಇವರ ಗಾಯನದ ವಿಶೇಷತೆಗಳೊಂದ್ದಾಗಿದ್ದು ಪ್ರೇಕ್ಷಕರ ಮನಮುಟ್ಟುವಂತೆ ಪ್ರದರ್ಶನ ನೀಡಿದರು.
ಸಮಾರಂಭದಲ್ಲಿ ರಂಗಕರ್ಮಿ ಕೆ.ಎಸ್.ಪ್ರಭಾಕರ್, ಚಳವಳಿಗಾರ ಪ.ಮಲ್ಲೇಶ್, ನಿರಂತರ ಫೌಂಡೇಷನ್ ಅಧ್ಯಕ್ಷ ಸುಗುಣ ಉಪಸ್ಥಿತರಿದ್ದರು.

Leave a Reply

comments

Related Articles

error: