ಮೈಸೂರು

ಮಂಗಳಮುಖಿಯರಿಂದ ಪ್ರೈಡ್ ಮಾರ್ಚ್

ಮೈಸೂರು,ಜು.2:-  ನಗರದ ಅಶೋಕ ಪುರಂನಲ್ಲಿರುವ ಮಂಗಳಮುಖಿಯರ ಆಶೋದಯ ಸಮಿತಿ ವತಿಯಿಂದ ಪ್ರೈಡ್ ಮಾರ್ಚ್ ಆರಂಭಗೊಂಡಿದೆ.

ಇಂದು ಅಶೋಕಪುರಂನಿಂದ ಹೊರಟು ನಗರ ನ್ಯಾಯಾಲಯದವರೆಗೆ ಮೆರವಣಿಗೆ ನಡೆಯಿತು. ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎ.ರಾಮದಾಸ್ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಅವರೊಂದಿಗೆ ಮಾತನಾಡಿದ ಶಾಸಕರು ಅವರು ಹಲವಾರು ಸಮಸ್ಯೆಗಳನ್ನು ಆಲಿಸಿದರು. ಅದರಲ್ಲಿ ಮುಖ್ಯವಾಗಿ ಆರೋಗ್ಯ ಸಮಸ್ಯೆ ಕಂಡುಬಂದರೆ ಅವರಿಗೆ ಸೂಕ್ತವಾದ ಚಿಕಿತ್ಸೆ ನೀಡುವುದಿಲ್ಲ, ಆದ್ದರಿಂದ ನಮಗೆ ಪ್ರತ್ಯೇಕವಾಗಿ ಒಂದು ಆಸ್ಪತ್ರೆ ಬೇಕು ಎಂದು ಶಾಸಕರಲ್ಲಿ ಅವರು ಮನವಿ ಮಾಡಿದ್ದಾರೆ.

ಲಕ್ಷ್ಮಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: