ಸುದ್ದಿ ಸಂಕ್ಷಿಪ್ತ
ಜು.4ರಂದು ಸಚ್ಚಿದಾನಂದ ಸರಸ್ವತಿ ವರ್ಧಂತಿ : ಪ್ರತಿಭಾ ಪುರಸ್ಕಾರ
ಮೈಸೂರು,ಜು.2 : ಮಹಾಜನ ಸಭಾದ ವತಿಯಿಂದ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಯವರ ವರ್ಧಂತಿ ಅಂಗವಾಗಿ ಜು.4ರಂದು ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಸಂಜೆ 6.30ಕ್ಕೆ ಕೃಷ್ಣಮೂರ್ತಿಪುರಂನ ಶ್ರೀರಾಮಮಂದಿರದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ. ವರ್ಧಂತಿ ಅಂಗವಾಗಿ ಬೆಳಗ್ಗೆ 9 ಗಂಟೆಯಿಂದ ವಿಶೇಷ ಪೂಜಾ ಕೈಂಕರ್ಯಗಳು, 11 ಗಂಟೆಯಿಮದ ಹೋಮ, ಹವನ ಹಾಗೂ ಮಹಾಮಂಗಳಾರತಿ ನಡೆಯಲಿದೆ ಎಂದು ಕಾರ್ಯದರ್ಶಿ ತಿಳಿಸಿದ್ದಾರೆ. (ಕೆ.ಎಂ.ಆರ್)