
ಪ್ರಮುಖ ಸುದ್ದಿ
ಕಾಣೆಯಾದವರ ಬಗ್ಗೆ ಮಾಹಿತಿ : ಪತ್ತೆಗೆ ಮನವಿ
ರಾಜ್ಯ(ಮಂಡ್ಯ),ಜು.2:- ಕೆ.ಆರ್.ಪೇಟೆ ತಾಲೂಕು ಮಡುವಿನಕೋಡಿ ಗ್ರಾಮ ನಿವಾಸಿ 75 ವರ್ಷದ ಲಕ್ಷ್ಮಮ್ಮ ಎಂಬವರು ಜೂನ್ 28 ರಿಂದ ಕಾಣೆಯಾಗಿದ್ದಾರೆ ಎಂದು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವೃದ್ದ ಮಹಿಳೆಯಾಗಿದ್ದು, 5.1 ಅಡಿ ಎತ್ತರ, ಗೋಧಿ ಮೈಬಣ್ಣ ಹೊಂದಿದ್ದು,ಸಾಧಾರಣ ಮೈಕಟ್ಟು ಹೆಚ್ಚಿನ ಮಾಹಿತಿಗೆ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಅಥವಾ ಮೊಬೈಲ್ ಸಂಖ್ಯೆ: 9480804860 ನ್ನು ಸಂಪರ್ಕಿಸಬಹುದು.
ಇನ್ನೊಂದು ಪ್ರಕರಣದಲ್ಲಿ ಮದ್ದೂರು ತಾಲೂಕು ಈರೇಗೌಡನದೊಡ್ಡಿ ಗ್ರಾಮ ನಿವಾಸಿ 44 ವರ್ಷದ ಸತೀಶ್ಬಾಬು ಎಂಬುವವರು ಕಾಣೆಯಾಗಿದ್ದಾರೆ ಎಂದು ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸತೀಶ್ಬಾಬು ಎಂಬವರು 5.10 ಅಡಿ ಎತ್ತರ, ದೃಢಕಾಯ ಶರೀರ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು ಬಿಳಿ ಬಣ್ಣದ ಬಟ್ಟೆ ಧರಿಸಿರುತ್ತಾರೆ. ಹೆಚ್ಚಿನ ಮಾಹಿತಿಗೆ ಬೆಸಗರಹಳ್ಳಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು. (ಕೆ.ಎಸ್,ಎಸ್.ಎಚ್)