ಮೈಸೂರು

ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ : ನಾಲ್ವರ ಬಂಧನ : ಓರ್ವ ಮಹಿಳೆಯ ರಕ್ಷಣೆ

ಮೈಸೂರು,ಜು.3:- ಮೈಸೂರಿನ ವೀರರಾಜೇ ಅರಸ್ ಬಡಾವಣೆಯಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿದ ಡಿಸಿಐಬಿ ಶಾಖೆಯ ಪೊಲೀಸರು ವೇಶ್ಯಾವಾಟಿಕೆಯ ಜಾಲದಲ್ಲಿ ಸಿಲುಕಿದ್ದ ಓರ್ವ ಮಹಿಳೆಯನ್ನು ರಕ್ಷಿಸಿ ಇಬ್ಬರು ಗ್ರಾಹಕರು ಹಾಗೂ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ ಒಂಭತ್ತು ಸಾವಿರ ರೂ.ನಗದನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರು ಹೆಚ್.ಡಿ.ಕೋಟೆ ರಸ್ತೆಯಲ್ಲಿ ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ವೀರ ರಾಜೇ ಅರಸ್ ಬಡಾವಣೆ ನಿವಾಸಿ ಸರಸ್ವತಿ, ಅಭಿಷೇಕ್, ರವಿ ಕುಮಾರ್, ಸಂದೇಶ್ ಕುಮಾರ್, ಎಂಬವರು ತಮ್ಮ ಮನೆಯಲ್ಲಿಯೇ ಮಹಿಳೆಯರು ಹಾಗೂ ಯುವತಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದಾರೆಂಬ ಮಾಹಿತಿಯನ್ನು ಸ್ಥಳೀಯರು ಡಿಸಿಐಬಿ ಪೊಲೀಸರಿಗೆ ನೀಡಿದ್ದರು. ಖಚಿತ ಮಾಹಿತಿಯ ಮೇರೆಗೆ ಎಎಸ್ ಪಿ  ಸ್ನೇಹ ಅವರ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್   ಸುನೀಲ್ ಕುಮಾರ್ ಮತ್ತು ಸಿಬ್ಬಂದಿಗಳು ವೇಶ್ಯಾವಾಟಿಕೆಯ ಅಡ್ಡೆಯ ಮೇಲೆ ದಾಳಿ ನಡೆಸಿ ಮಹಿಳೆಯೋರ್ವರನ್ನು ರಕ್ಷಿಸಿದ್ದಾರೆ.

ನಾಲ್ವರು ಬಂಧಿತರ ವಿರುದ್ಧ ಐಟಿಪಿ ಆ್ಯಕ್ಟ್ 3,4,5,6 ಮತ್ತು 7 ಮೊಕದ್ದಮೆ ದಾಖಲಿಸಿ ದಕ್ಷಿಣ ಗ್ರಾಮಾಂತರ ಠಾಣೆಗೆ ಪ್ರಕರಣವನ್ನು ವರ್ಗಾಯಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: