ಮೈಸೂರು

ಜ್ಯುವೆಲ್ಲರಿ ಅಂಗಡಿಗಳಲ್ಲಿ ನಕಲಿ ಪದಾರ್ಥಗಳನ್ನಿಟ್ಟು ಅಸಲಿ ಚಿನ್ನದ ಪದಾರ್ಥಗಳನ್ನು ಕಳವು ಮಾಡುತ್ತಿದ್ದ ದಂಪತಿಗಳ ಬಂಧನ

ಮೈಸೂರು,ಜು.3:- ಮೈಸೂರು ನಗರ ಸಿಸಿಬಿ ಘಟಕದ ಪೊಲೀಸರು ಮಾಹಿತಿ ಮೇರೆಗೆ  2/7/2019 ರಂದು ಮಂಡಿ ಮೊಹಲ್ಲಾದ ಸಾಡೇ ರಸ್ತೆಯಲ್ಲಿರುವ ಮಲ್ಲಿಕ್ ಜ್ಯುವೆಲ್ಲರಿ ಬಳಿ ಕಾರ್ಯಾಚರಣೆ ನಡೆಸಿ ಜ್ಯುವೆಲರಿ ಅಂಗಡಿಗಳಲ್ಲಿ ನಕಲಿ ಪದಾರ್ಥಗಳನ್ನಿಟ್ಟು ಅಸಲಿ ಚಿನ್ನದ ಪದಾರ್ಥಗಳನ್ನು ಕಳವು ಮಾಡುತ್ತಿದ್ದ ದಂಪತಿಯನ್ನು ಬಂಧಿಸಿದ್ದಾರೆ.

ಬಂಧಿತರನ್ನು ಸಿದ್ದಿಖ್ ಬಿನ್ ಬಾಬು, (25), ಮಸೀದಿಯಲ್ಲಿ ಮೌಲ್ವಿ ಕೆಲಸ, ಗೌಸಿಯಾನಗರ, ಮೈಸೂರು,  ಮದೀನ ಕೋಂ ಸಿದ್ದಿಖ್,( 19), ಗೌಸಿಯಾನಗರ  ಎಂಬವರನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ ಸುಮಾರು  2 ಲಕ್ಷ ರೂ. ಬೆಲೆಬಾಳುವ 61 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರಿಂದ ಮಂಡಿ ಪೊಲೀಸ್ ಠಾಣೆಯ 02 ಪ್ರಕರಣಗಳು ಮತ್ತು ಲಷ್ಕರ್ ಪೊಲೀಸ್ ಠಾಣೆಯ 01 ಪ್ರಕರಣ ಪತ್ತೆ ಆಗಿದೆ.

ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ (ಕಾ ಮತ್ತು ಸು) ಮುತ್ತುರಾಜು. ಎಂ ಅವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ. ಘಟಕದ ಎ.ಸಿ.ಪಿ. ಬಿ.ಆರ್. ಲಿಂಗಪ್ಪ   ನೇತೃತ್ವದಲ್ಲಿ ಸಿ.ಸಿ.ಬಿ.ಯ ಪಿ.ಐ.   ಸಿ.ಕಿರಣ್‍ಕುಮಾರ್, ಎ.ಎಸ್.ಐ. ಚಂದ್ರೇಗೌಡ, ಸಿಬ್ಬಂದಿಗಳಾದ  ರಾಮಸ್ವಾಮಿ, ಎಂ.ಆರ್ ಗಣೇಶ್, ಸಿ.ಚಿಕ್ಕಣ್ಣ, ಸಿ.ಎನ್.ಶಿವರಾಜು, ಯಾಕೂಬ್ ಷರೀಪ್, ಅಸ್ಗರ್‍ಖಾನ್, ಚಂದ್ರಶೇಖರ, ನಿರಂಜನ್, ರಾಜೇಂದ್ರ, ಚಾಮುಂಡಮ್ಮ ಮಾಡಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: