ಮನರಂಜನೆ

ಇನ್ನೂ ವಿವಾಹವಾಗಿಲ್ಲ; ಮೂರು ವರ್ಷದ ಹಿಂದೆಯೇ ಮಗುವಿಗೆ ಜನ್ಮ ನೀಡಿದ್ದೇನೆ ಎಂದ ಬಾಲಿವುಡ್ ನಟಿ

ದೇಶ(ನವದೆಹಲಿ)ಜು.3:- ದೇವ್ –ಡಿ, ಸಾಹೇಬ್ ಬಿವಿ ಮತ್ತು ಗ್ಯಾಂಗ್ ಸ್ಟರ್ ಗಳಲ್ಲಿ ಬೋಲ್ಡ್ ಅಗಿ ಕಾಣಿಸಿಕೊಂಡು ಪ್ರೇಕ್ಷಕರ ಮನಗೆದ್ದ ಬಾಲಿವುಡ್ ನಟಿ ಮಾಹಿ ಗಿಲ್ ತನ್ನ ವೈಯುಕ್ತಿಕ ಜೀವನದ ರಹಸ್ಯವನ್ನು ತೆರೆದಿರಿಸುವ ಮೂಲಕ ಚರ್ಚೆಯಲ್ಲಿದ್ದಾರೆ.

ನಾನೀಗ ಒಂದು ಹೆಣ್ಣುಮಗುವಿನ ತಾಯಿ. ನನಗೆ ಹೆಮ್ಮೆಯಿದೆ. ನಾನಿನ್ನೂ ವಿವಾಹವಾಗಿಲ್ಲ. ಆದರೆ ನಾನು ವಿವಾಹವಾಗಲು ಇಚ್ಛಿಸುತ್ತೇನೆ ಎಂದಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವರ್ಷದ ಆಗಸ್ಟ್ ಗೆ ನನ್ನ ಮಗಳಿಗೆ ಮೂರು ವರ್ಷವಾಗಲಿದೆ. ಯಾರೂ ನನ್ನೊಂದಿಗೆ ಈ ಕುರಿತು ಪ್ರಶ್ನಿಸಿಲ್ಲ. ಅದಕ್ಕಾಗಿ  ನಾನೂ ಹೇಳಿಲ್ಲ. ಈಗ ಕೇಳುತ್ತಿದ್ದಾರೆ ಅದಕ್ಕೆ ಹೇಳಿದ್ದೇನೆ. ನಾನು ಸಿಂಗಲ್ ಪೇರೆಂಟ್.  ನನ್ನ ಬಾಯ್ ಫ್ರೆಂಡ್ ಗೋವಾದಲ್ಲಿ ಬಿಜಿನೆಸ್ ಮಾಡುತ್ತಿದ್ದಾರೆ. ಅದಕ್ಕಾಗಿ ಗೋವಾಕ್ಕೆ ಹೋಗೋದು ಬರೋದು ನಡೆದೇ ಇದೆ. ಮಗಳು ನನ್ನ ಜೊತೆಯೇ ಮುಂಬೈನಲ್ಲಿದ್ದಾಳೆ. ಅವಳನ್ನು ನನ್ನ ಆಂಟಿ ನೋಡಿಕೊಳ್ಳುತ್ತಾರೆ ಎಂದಿದ್ದಾರೆ.

ವಿವಾಹದ ಯೋಜನೆ ಕುರಿತು ಪ್ರಶ್ನಿಸಿದ್ದಕ್ಕೆ ವಿವಾಹವಾಗುವ ಅವಶ್ಯಕತೆ ಏನಿದೆ? ಅವೆಲ್ಲ ಆಗಬೇಕಾದಾಗ ಆಗಲಿದೆ. ಅವಲಂಬಿತವಾಗಿದೆ. ವಿವಾಹವಿಲ್ಲದೆಯೇ ಕುಟುಂಬ ಮತ್ತು ಮಗುವನ್ನು ಹೊಂದಬಹುದು. ಇದರಲ್ಲಿ ಯಾವುದೇ ಸಮಸ್ಯೆಯಿಲ್ಲ. ವಿವಾಹವಿಲ್ಲದೇ ಮಗುವಾಗುವುದು ಒಂದು ಸಮಸ್ಯೆಯೂ ಅಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಆದ ಬದುಕಿದೆ, ಸಿದ್ದಾಂತವಿದೆ.  ವಿವಾಹ ವೆಂಬುದು ಸುಂದರ ಪದ್ಧತಿ ಆದರೆ ಅದು ನಿಮ್ಮ ವೈಯುಕ್ತಿಕ ಆಯ್ಕೆಯಾಗಿರಬೇಕು ಎಂದು ಬೋಲ್ಡ್ ಆಗಿಯೇ ಉತ್ತರ ನೀಡಿದ್ದಾರೆ. (ಎಸ್.ಎಚ್)

Leave a Reply

comments

Related Articles

error: