ಮೈಸೂರು

ಗೃಹಿಣಿ ಸೌಮ್ಯಾ ಕೊಲೆ ಪ್ರಕರಣ : ಪತಿ ಶಿವಕುಮಾರ್ ಬಂಧನ

ಮೈಸೂರು,ಜು.4:- ಯರಗನಹಳ್ಳಿ ನಿವಾಸಿ ಗೃಹಿಣಿ ಸೌಮ್ಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಶಿವಕುಮಾರ್ ಅವರನ್ನು ಆಲನಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಶಿವಕುಮಾರ್ ಶ್ರೀರಂಗಪಟ್ಟಣದಲ್ಲಿ ಅಡಗಿದ್ದ. ದೇವರಾಜ ಉಪವಿಭಾಗದ ಎಸಿಪಿ ಗಜೇಂದ್ರಪ್ರಸಾದ್ ನೇತೃತ್ವದ ತಂಡ ಸ್ಥಳಕ್ಕೆ ತೆರಳಿ ಬಂಧಿಸಿದೆ.

ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಶಿವಪ್ರಸಾದ್ ಮತ್ತು ಮಾಣಿಕ್ ಇದ್ದರು. ಸೌಮ್ಯ ಅವರ ಮೃತದೇಹ ಅವರ ನಿವಾಸದಲ್ಲಿ ಭಾನುವಾರವಷ್ಟೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸೌಮ್ಯಾ ಕುಟುಂಬಿಕರು ಶಿವು ಪದೇ ಪದೇ ಸೌಮ್ಯಾಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದ. ಸೌಮ್ಯ ವರದಕ್ಷಿಣೆ ತರಲು ಒಪ್ಪದ್ದಕ್ಕೆ ಹೊಡೆದು ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಆರೋಪಿಸಿದ್ದರು. ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಸೌಮ್ಯಾ ಪತಿ ಶಿವು, ಆಕೆಯ ಅತ್ತೆ, ಮಾವ, ನಾದಿನಿ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: