ದೇಶಪ್ರಮುಖ ಸುದ್ದಿ

ಪುರಿಯ ಜಗನ್ನಾಥ ರಥ ಯಾತ್ರೆ: ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿಯಿಂದ ಶುಭಾಶಯ; ವಿಶೇಷ ಪೂಜೆ ಸಲ್ಲಿಸಿದ ಅಮಿತ್ ಶಾ

ನವದೆಹಲಿ,ಜು.4-ಪುರಿಯ ಜಗನ್ನಾಥ ದೇವರ ರಥ ಯಾತ್ರೆ ಇಂದಿನಿಂದ ಆರಂಭವಾಗಿದೆ. ಇದರ ಪ್ರಯುಕ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭಾಶಯ ತಿಳಿಸಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವಿಟರ್ ಮೂಲಕ, ಪುರಿ ಜಗನ್ನಾಥ ರಥ ಯಾತ್ರೆಯ ಶುಭಗಳಿಗೆಯಲ್ಲಿ ದೇಶದ ಜನತೆಗೆ ಶುಭಾಶಯಗಳು. ಜಗನ್ನಾಥ ದೇವರ ಆಶೀರ್ವಾದದಿಂದ ಪ್ರತಿಯೊಬ್ಬರ ಜೀವನದಲ್ಲಿಯೂ ಸುಖ, ಶಾಂತಿ, ಸಂತೋಷ, ಸಮೃದ್ಧಿ ತರಲಿ ಎಂದು ಹಾರೈಸಿದ್ದಾರೆ.

ಪ್ರಧಾನಿ ಮೋದಿ, ರಥಯಾತ್ರೆಯ ವಿಶೇಷ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳು. ಪ್ರತಿಯೊಬ್ಬರ ಆರೋಗ್ಯ, ಸಂತೋಷ ಹಾಗೂ ಸಮೃದ್ಧಿಗಾಗಿ ಭಗವಾನ್ ಜಗನ್ನಾಥನಲ್ಲಿ ಪ್ರಾರ್ಥಿಸುತ್ತೇವೆ. ಜೈ ಜಗನ್ನಾಥ್ ಎಂದು ಟ್ವಿಟ್ ಮಾಡಿದ್ದಾರೆ.

ಇನ್ನು ಗುಜರಾತ್‌ನ ಅಹಮದಾಬಾದ್‌ನ ಜಗನ್ನಾಥ ದೇವಾಲಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಪತ್ನಿ ಸೋನಾಲ್‌ ಶಾ ಅವರೊಂದಿಗೆ ವಿಶೇಷ ಪೂಜೆಯಲ್ಲಿ ಭಾಗಿಯಾದರು.

450 ವರ್ಷಗಳಿಗೂ ಹಳೆಯದಾದ ಪುರಾತನ ದೇವಾಲಯದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅಮಿತ್‌ ಶಾ ಅವರು ಪತ್ನಿ ಯೊಂದಿಗೆ ವಿಶೇಷ ಮಂಗಳಾರತಿ ಬೆಳಗಿದರು.

ಒರಿಸ್ಸಾದ ವಿಶ್ವವಿಖ್ಯಾತ ಪುರಿ ಜಗನ್ನಾಥ ರತ ಯಾತ್ರೆ ಇಂದು ಆರಂಭವಾಗಿದೆ. ರಥ ಯಾತ್ರೆಯಲ್ಲಿ ಮೂರು ದೇವತೆಗಳಾದ ಬಲಭದ್ರ, ಜಗನ್ನಾಥ ಮತ್ತು ಸುಭದ್ರಾ ದೇವಿಯ ಮೂರ್ತಿಗಳನ್ನು ಪ್ರತಿವರ್ಷ ನಿರ್ಮಿಸಲಾಗುತ್ತದೆ. ಸಾಂಪ್ರದಾಯಿಕ ಕಲಾವಿದರು ಮೂರ್ತಿಗಳನ್ನು ತಯಾರಿಸಿ ಅಲಂಕಾರ ಮಾಡುತ್ತಾರೆ. ದೇವರನ್ನು ಹೊರುವ ರಥ ನಿರ್ಮಿಸಲು ಆರಂಭಿಸುವುದು ಪವಿತ್ರ ಅಕ್ಷಯ ತೃತೀಯ ದಿನ.

ಹಲವು ತಿಂಗಳುಗಳ ಕಾಲ ಸಾವಿರಾರು ಕುಶಲಕರ್ಮಿಗಳು ಮರ ಕಡಿಯುವುದರಿಂದ ಹಿಡಿದು ರಥವನ್ನು ಜೋಡಿಸುವುದು, ಚಿತ್ರಕಲೆ ಮಾಡುವ ಕೆಲಸ ಮಾಡುತ್ತಾರೆ. ಪುರಿ ಜಗನ್ನಾಥ ಸ್ವಾಮಿಯ ಯಾತ್ರೆಯಲ್ಲಿ ರಥವು ಮುಖ್ಯ ಆಕರ್ಷಣೆಯಾಗಿರುತ್ತದೆ. (ಎಂ.ಎನ್)

 

Leave a Reply

comments

Related Articles

error: