ಪ್ರಮುಖ ಸುದ್ದಿಮೈಸೂರು

ಮೋದಿ ಈ ಹಿಂದೆ ನಾವು ಆಪರೇಷನ್ ಕಮಲ ಮಾಡಲ್ಲ ಅಂತ ಹೇಳಿದ್ದರು ಅದಕ್ಕೆ ನಾನು ಹಾಗೇ ಹೇಳಿದ್ದೇನೆ‌ : ಮಾಜಿ ಸಿಎಂ ಸಿದ್ದುಗೆ ಸಚಿವ ಜಿಟಿಡಿ ಟಾಂಗ್

ಮೈಸುರು,ಜು.4:-  ಮೋದಿ ಈ ಹಿಂದೆ  ನಾವು ಆಪರೇಷನ್ ಕಮಲ ಮಾಡಲ್ಲ ಅಂತ ಹೇಳಿದ್ದರು, ಅದಕ್ಕೆ  ನಾನು ಹಾಗೇ ಹೇಳಿದ್ದೇನೆ‌ ಎನ್ನುವ ಮೂಲಕ  ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ  ಸಚಿವ ಜಿ.ಟಿ. ದೇವೇಗೌಡ  ಟಾಂಗ್ ನೀಡಿದರು.

ನಿನ್ನೆ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ನೀವು ಜಿ.ಟಿ.ದೇವೇಗೌಡರನ್ನೇ  ಕೇಳಿ ಎಂದಿದ್ದಕ್ಕೆ ಇಂದು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಬಿಜೆಪಿಯಿಂದ ನನಗೆ 50 ಕೋಟಿ ರೂ ಆಫರ್ ಬಂದಿತ್ತು ಎಂಬ ಪಿರಿಯಾಪಟ್ಟಣದ ಶಾಸಕ ಮಹದೇವ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಈ ಬಗ್ಗೆ ಹೆಚ್ಚು ಮಾತನಾಡುವುದು ಸರಿಯಲ್ಲ. ಯಾರೇ ಆಗಲಿ ಈ ರೀತಿ ಮಾತನಾಡಬಾರದು. ಈ ಬಗ್ಗೆ ಮಹದೇವ ಅವರನ್ನೇ ಕೇಳುವುದು ಸೂಕ್ತ. ನನ್ನಿಂದ ಅದಕ್ಕೆ ಉತ್ತರ ಇರುವುದಿಲ್ಲ ಎಂದರು.

ಮೈಸೂರು ಏರ್ಪೋರ್ಟ್ ರನ್ ವೇ ನಿರ್ಮಾಣಕ್ಕೆ ಉಂಟಾಗಿದ್ದ ತೊಂದರೆ ಈಗ ನಿವಾರಣೆಯಾಗಿದೆ. ಪ್ರಕಾಶ್ ಎಂಬವರು ರನ್ ವೇ ನಿರ್ಮಾಣಕ್ಕೆ ಜಮೀನು ಕೊಡಲ್ಲ ಅಂತ ಪಟ್ಟು ಹಿಡಿದ್ದಿದ್ದರು. ಆದರೆ ಈಗ ಜಮೀನು ನೀಡಲು ಮುಂದೆ ಬಂದಿದ್ದಾರೆ. ಒಂದು ಎಕರೆಗೆ 2 ಕೋಟಿ ನೀಡಬೇಕೆಂದು ಪಟ್ಟು  ಹಿಡಿದ್ದರು. ಆದರೆ ಸರ್ಕಾರ 1.5 ಕೋಟಿ ನೀಡಲು ತೀರ್ಮಾನಿಸಿತ್ತು.ಆದರೆ ಇವರು ಹೋರಾಟಕ್ಕೆ ಇಳಿದಿದ್ದರು. ಇವತ್ತು ಅವರ  ವೈಯುಕ್ತಿಕ ಕಾರಣದಿಂದ ಇಲ್ಲಿಗೆ ಬಂದಿದ್ರು. ಜಿಲ್ಲಾಧಿಕಾರಿಗಳು ಹಾಗೂ ನಾವು ಇಬ್ಬರು ಕೂತು ಮಾತನಾಡಿ ಅವರನ್ನು ಒಪ್ಪಿಸಿದಾಗ  ಜಮೀನು ನೀಡಲು ಮುಂದಾಗಿದ್ದಾರೆ. ಶನಿವಾರ ಎಲ್ಲಾ ರೈತರೊಂದಿಗೆ ಕೂತು ಮಾತನಾಡಿ ಎಲ್ಲ ಕೆಲಸವನ್ನು ಸರಾಗವಾಗಿ ಅಧಿಕಾರಿಗಳು ಮಾಡಲಿದ್ದಾರೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: