ಪ್ರಮುಖ ಸುದ್ದಿಮೈಸೂರು

ಒಡನಾಡಿಯಲ್ಲಿ ದಿ.ರಾಜಶೇಖರ ಕೋಟಿ ಪುತ್ಥಳಿ ಸ್ಥಾಪನೆ -‘ ಜೀವ ಸಂಗಮ’ ಉದ್ಘಾಟನೆ.6.

ಮೈಸೂರು. ಜು.4 : ಹಿರಿಯ ಪತ್ರಕರ್ತ ದಿ.ರಾಜಶೇಖರ ಕೋಟಿ ಸ್ಮರಣಾರ್ಥ ಪುತ್ಥಳಿ ಸ್ಥಾಪನೆ ಹಾಗೂ ಸರಳ ವಿವಾಹ ಸಭಾಂಗಣ “ಜೀವ ಸಂಗಮ” ದ ಅನಾವರಣವನ್ನು ಒಡನಾಡಿ ಸೇವಾ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಒಡನಾಡಿಯ ಸ್ಟ್ಯಾನ್ಲಿ ಮತ್ತು ಪರಶು ತಿಳಿಸಿದರು.

ಗುರುವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಸ್ಟ್ಯಾನ್ಲಿ, ರಾಜಶೇಖರ ಕೋಟಿಯವರು ತಮ್ಮ ಸಂಸ್ಥೆಯ ಬೆನ್ನೆಲುಬಾಗಿದ್ದರು. ಅಲ್ಲದೇ ತಮ್ಮೆಲ್ಲಾ ಸಾಮಾಜಿಕ ಕಳಕಳಿಯ ಕೆಲಸಗಳನ್ನು ಪ್ರೋತ್ಸಾಹಿಸುವ ಮೂಲಕ ಸಂಸ್ಥೆಯ ಹಿತೈಷಿಗಳಾಗಿದ್ದರು. ಅದ್ದರಿಂದ ಅವರ ಸ್ಮರಣಾರ್ಥ ಅವರ ಪುತ್ಥಳಿಯನ್ನು ಸಂಸ್ಥೆ ಆವರಣದಲ್ಲಿ ಸ್ಥಾಪಿಸಲಾಗುತ್ತಿದ್ದು. ಇದರೊಂದಿಗೆ ಸರಳ‌ ವಿವಾಹ ಪ್ರೋತ್ಸಾಹದ ನಿಟ್ಟಿನಲ್ಲಿ ‘ಜೀವ ಸಂಗಮ’ ಸಭಾಂಗಣ ಲೋಕಾರ್ಪಣೆ ಗೊಳಿಸಲಾಗುವುದು ಎಂದರು.
ಪರಶು ಮಾತನಾಡಿ. ‌ಸಂಸದ ಶ್ರೀ ನಿವಾಸ ಪ್ರಸಾದ್. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಮಾಜಿ ಶಾಸಕ ವಾಸು ಅವರುಗಳು ಉದ್ಘಾಟಿಸುವರು.
ನಂತರ “ಪತ್ರಿಕಾ ಮಾಧ್ಯಮ ಹಾಗೂ ಸಾಮಾಜಿಕ ಜವಾಬ್ದಾರಿ’ ವಿಷಯವಾಗಿ ನಡೆಯುವ ಗೋಷ್ಠಿಯಲ್ಲಿ ಹಿರಿಯ ಪತ್ರಕರ್ತರಾದ ಸುಗತ ಶ್ರೀನಿವಾಸರಾಜು ಹಾಗೂ ಸಿ.ಜಿ.ಮಂಜುಳ ಅವರು ಮಾತನಾಡುವರು.

ಸರಳ ಹಾಗೂ ಅಂತರ್ಜಾತಿ ವಿವಾಹದ ಪ್ರೋತ್ಸಾಹದ ನಿಟ್ಟಿನಲ್ಲಿ ಈ ಸಭಾಂಗಣ ನಿರ್ಮಿಸಿದು ಜಾತಿ.ಮತ ಬೇಧವೆಣಿಸಿದೆ ಅತಿ ಕಡಿಮೆ ಬೆಲೆಯಲ್ಲಿ ನೀಡಲಾಗುವುದು ಎಂದರು.

ದಿ.6ರಂದಯ ಜೆ.ಪಿ.ನಗರದ ಒಡನಾಡಿ ಬಾಲಕರ ಪುನರ್ವಸತಿ ಕೇಂದ್ರದಲ್ಲಿ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ  ನಡೆಸಲಾಗುವುದು.
ಸಂಸ್ಥೆಯ ‌ಪೃಥ್ವಿ. ಪ್ರದೀಪ್ ಗೋಷ್ಠಿಯಲ್ಲಿ ಇದ್ದರು. ( ವರದಿ : ಕೆ.ಎಂ.ಆರ್)

Leave a Reply

comments

Related Articles

error: