ಸುದ್ದಿ ಸಂಕ್ಷಿಪ್ತ

ಮಳೆಗಾಗಿ ಸಾರ್ವಜನಿಕ ಯಾಗ

ಮೈಸೂರು, ಜು.4- ನಗರದ ಸಾದನಹಳ್ಳಿ ಶ್ರೀ ಸಪ್ತರ್ಷಿ ವೈದಿಕ ಗುರುಕುಲ ಸೇವಾಶ್ರಮ, ಶ್ರೀ ಲಕ್ಷ್ಮೀವರದರಾಜಸ್ವಾಮಿ ಸನ್ನಿಧಿಯ ಆವರಣದಲ್ಲಿ ಜು.7ರಂದು ಭಾನುವಾರ ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪರಮಪೂಜ್ಯ ಶ್ರೀ ಅಭಿನವ ರಾಮಾನುಜಾಚಾರ್ಯರ ಸಮಕ್ಷಮದಲ್ಲಿ ಪರ್ಜನ್ಯ ಜಪ ಹಾಗೂ ಮಳೆಯನ್ನು ಆಹ್ವಾನಿಸುವ ಯಾಗವನ್ನು ಸಾರ್ವಜನಿಕರ ಸಮ್ಮುಖದಲ್ಲಿ ಏರ್ಪಡಿಸಲಾಗಿದೆ. ಮಳೆಗಾಗಿ ಸಾರ್ವಜನಿಕ ಯಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಲು ಕೋರಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ 94484434111 ಹಾಗೂ 9844396949 ಸಂಪರ್ಕಿಸಬಹುದು. (ಎಸ್.ಎಚ್)

Leave a Reply

comments

Related Articles

Check Also

Close
error: