ಪ್ರಮುಖ ಸುದ್ದಿಮೈಸೂರು

ನಾಳೆಯಿಂದ ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿಯ  ಆಷಾಢ ಮಹೋತ್ಸವ : ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

ಮೈಸೂರು,ಜು.4:-  ನಾಳೆ ನಾಡಿದ ಅಧಿದೇವತೆ ತಾಯಿ ಚಾಮುಂಡೇಶ್ವರಿಯ  ಆಷಾಢಮಹೋತ್ಸವ ಹಿನ್ನೆಲೆ ಮೈಸೂರು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಚಾಮುಂಡಿಬೆಟ್ಟದಲ್ಲಿ ನಾಳೆ ಬೆಳಿಗ್ಗೆ 3ಗಂಟೆಯಿಂದ ವಿವಿಧ ಮಹಾನ್ಯಾಸ  ರುದ್ರಾಭಿಷೇಕ ನಡೆಯಲಿದ್ದು  ದೇವಿಯ ದರ್ಶನಕ್ಕೆ ಲಕ್ಷಾಂತರ ಮಂದಿ ಸೇರುವ ನಿರೀಕ್ಷೆ ಇದೆ. ಈಗಾಗಲೇ ಭಕ್ತರ ಹಿತ ದೃಷ್ಟಿಯಿಂದ ಪೊಲೀಸ್ ಭದ್ರತೆ ವಹಿಸಲಾಗಿದ್ದು, ದೇವಸ್ಥಾನದ ಹೊರ ಆವರಣದಲ್ಲಿ ಈಗಾಗಲೇ ಸಿದ್ಧತೆ ಕಾರ್ಯ ಬರದಿಂದ ಸಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ದೇವಾಲಯದ ಪ್ರಧಾನ ಅರ್ಚಕ ಡಾ. ಶಶಿಶೇಖರ್ ದೀಕ್ಷಿತ್ , ಮೊದಲನೇ ಆಷಾಢ ಶುಕ್ರವಾರ ದೇವಿಗೆ ಲಕ್ಷ್ಮೀ  ಅಲಂಕಾರ, ದೇವಾಲಯದ ಗರ್ಭಗುಡಿ  ಆವರಣದಲ್ಲಿ ವಿವಿಧ ಹೂವಿನ ಅಲಂಕಾರ ಮಾಡಲಾಗುತ್ತದೆ. ಬೆಳಗ್ಗೆ 5.30ರಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿದ್ದು, ಸರತಿ ಸಾಲಿನಲ್ಲಿ ನಿಲ್ಲುವ ಭಕ್ತಾದಿಗಳಿಗೆ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ  ಮಾಡಲಾಗಿದೆ. ಭಕ್ತರ ಹಿತ ದೃಷ್ಟಿಯಿಂದ ಈ ಬಾರಿ ದಾಸೋಹದಲ್ಲಿ  ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ಹಿನ್ನೆಲೆಯಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: