ಮನರಂಜನೆಮೈಸೂರು

ಮೊದಲ ಆಷಾಢ ಶುಕ್ರವಾರದ ಪ್ರಯುಕ್ತ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದ ‘ಡಿ’ಬಾಸ್

ಮೈಸೂರು,ಜು.5:- ಇಂದು ಮೊದಲ ಆಷಾಢ  ಶುಕ್ರವಾರದ ಪ್ರಯುಕ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು.

ಇಂದು ಬೆಳಿಗ್ಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ನಟ ದರ್ಶನ್ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದು, ಈ ವೇಳೆ ದೇವಸ್ಥಾನದ ಅರ್ಚಕರು ದರ್ಶನ್ ಗೆ ಹಾರ ಹಾಕಿ ಪ್ರಸಾದ ನೀಡಿದರು. ಬಳಿಕ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕರಿಯಿಸಿದ ‘ಡಿ’ಬಾಸ್  ಪ್ರತಿವರ್ಷ ಆಷಾಢ ಶುಕ್ರವಾರದ ದಿವಸ ತಾಯಿಯ ದರ್ಶನ ಪಡೆಯಲು ಬರುತ್ತೇನೆ. ನಮಗೆ ಪವರ್ ಇರೋದೆ ಆ ತಾಯಿಯಿಂದ. ಆ ತಾಯಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದರು. ಈ ಸಂದರ್ಭ ಅವರ ಅಭಿಮಾನಿಗಳು ಅವರ ಜೊತೆಗಿದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: