ಸುದ್ದಿ ಸಂಕ್ಷಿಪ್ತ

ವಿವಿಧ ಯೋಜನೆಗಳಡಿ ಸೌಲಭ್ಯ : ಅರ್ಜಿ ಆಹ್ವಾನ

ರಾಜ್ಯ(ಮಂಡ್ಯ)ಜು.5:-   ಕರ್ನಾಟಕ ತಾಂಡ ಅಭಿವೃದ್ದಿ ನಿಗಮದಿಂದ 2019-20ನೇ ಸಾಲಿನಲ್ಲಿ ಉದ್ಯಮ ಶೀಲತಾ ಅಭಿವೃದ್ದಿ ಯೋಜನೆ, ಪ್ರೇರಣಾ ಮತ್ತು ಗಂಗಾ ಕಲ್ಯಾಣ ಯೋಜನೆಯಡಿ ವೈಯಕ್ತಿಕ ನೀರಾವರಿ ಕೊಳವೆ ಬಾವಿ ಯೋಜನೆ ಮತ್ತು ತೆರೆದ ಬಾವಿ ಸೌಲಭ್ಯ ಪಡೆಯಲು ಆಸಕ್ತಿಯುಳ್ಳ ಹಾಗೂ ಇದುವರೆಗೂ ನಿಗಮದಿಂದ ಯಾವುದೇ ಸೌಲಭ್ಯ ಪಡೆಯದ ಪರಿಶಿಷ್ಟ ಜಾತಿ ಲಂಬಾಣಿ ಜನಾಂಗಕ್ಕೆ ಸೇರಿದ 18 ರಿಂದ 60 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಈ ಹಿಂದೆ ಅರ್ಜಿ ಸಲ್ಲಿಸಿ ಸೌಲಭ್ಯ ಸಿಗದೇ ಇದ್ದಲ್ಲಿ ಅಂತವರು ಮತ್ತೊಮ್ಮೆ ಅರ್ಜಿಯನ್ನು ಸಲ್ಲಿಸಬಹುದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ಆಗಸ್ಟ್ 14 ಕೊನೆಯ ದಿನ.  ಅರ್ಜಿಗಳನ್ನು ಜಿಲ್ಲಾ ಕಛೇರಿಯಲ್ಲಿ ಅಥವಾ ಆಯಾ ತಾಲೂಕಿನ ತಾಲೂಕು ಅಭಿವೃದ್ಧಿ ಅಧಿಕಾರಿ ಮುಖಾಂತರ ಉಚಿತವಾಗಿ ಪಡೆಯಬಹುದು.

ಅರ್ಜಿ ಜೊತೆ ಭಾವಚಿತ್ರ, ಜೀವಿತ ಅವಧಿಯ ಜಾತಿ ಪ್ರಮಾಣ ಪತ್ರ, ಚಾಲ್ತಿಯಲ್ಲಿರುವ ಆದಾಯ ಪ್ರಮಾಣ ಪತ್ರ, ಆಹಾರ ಪಡಿತರ ಚೀಟಿ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಉಳಿತಾಯ ಖಾತೆಯ ಪ್ರತಿ, ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಿಸಿದಂತೆ ಕನಿಷ್ಠ 1.20 ಎಕರೆ ಯಿಂದ 5.00 ಎಕರೆ ಖುಷ್ಕಿ ಜಮೀನನ್ನು ಹೊಂದಿದಂತಹ ಸಣ್ಣ ಹಾಗೂ ಅತೀಸಣ್ಣ ರೈತರುಗಳು ಪಹಣಿ ಮತ್ತು ಸಣ್ಣ ಹಿಡುವಳಿದಾರರ ಪತ್ರ ಲಗತ್ತಿಸಬೇಕು. ಉದ್ಯಮ ಶೀಲತಾ ಯೋಜನೆಯಡಿ ಅರ್ಜಿ ಸಲ್ಲಿಸುವವರು ಯೋಜನಾ ವರದಿಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಚೇರಿ, ಕರ್ನಾಟಕ ತಾಂಡ ಅಭಿವೃದ್ದಿ ನಿಗಮ ನಿಯಮಿತ, ಮಂಡ್ಯ ಅಥವಾ ದೂರವಾಣಿ ಸಂಖ್ಯೆ:08232-221157 ನ್ನು ಸಂಪರ್ಕಿಸಬಹುದು. (ಎಸ್.ಎಚ್)

Leave a Reply

comments

Related Articles

error: