ಸುದ್ದಿ ಸಂಕ್ಷಿಪ್ತ

ಜು.9ರಂದು ವಿಶೇಷ ಉಪನ್ಯಾಸ

ಮೈಸೂರು,ಜು.5 : ಮೈವಿವಿ ಪ್ರಾಚ್ಯವಿದ್ಯಾ ಸಂಶೋಧನಾಲಯ ಮತ್ತು ಎಸ್.ಬಿ.ಅರ್.ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದಿಂದ ‘ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಇತಿಹಾಸ ಮತ್ತು ರಾಜಕೀಯ ವಿಶ್ಲೇಷಣೆ’ ವಿಷಯವಾಗಿ ಜು.9ರ ಬೆಳಗ್ಗೆ 11 ಗಂಟೆಗೆ ಕಾರ್ಮಸ್ ಲ್ಯಾಬ್ ಸಭಾಂಗಣದಲ್ಲಿ ಉಪನ್ಯಾಸ ನಡೆಸಲಾಗುವುದು.

ಕರ್ನಾಟಕ ಸಂಸ್ಕೃತ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಉದ್ಘಾಟಿಸುವರು. ಕಾರ್ಯದರ್ಶಿ ಡಾ.ಟಿ.ವಿಜಯಲಕ್ಷ್ಮೀ ಮುರಳೀಧರ್ ಅಧ್ಯಕ್ಷತೆ ವಹಿಸುವರು. ಡಾ.ಆರ್.ಎನ್.ನಾಗರಾಜು ಉಪನ್ಯಾಸ ನೀಡುವರು. (ಕೆ.ಎಂ.ಆರ್)

Leave a Reply

comments

Related Articles

error: