ಮೈಸೂರು

ಕೇಂದ್ರ ಸರ್ಕಾರದ ಬಜೆಟ್ ನೀಡಿಲ್ಲವಾದರೂ ಕೆಲವೊಂದು ಪ್ರೋತ್ಸಾಹ, ತೆರಿಗೆ ಕಡಿತ, ರಿಯಾಯಿತಿ, ವಿನಾಯಿತಿ ನೀಡಿದ್ದು ಸ್ವಾಗತಾರ್ಹ

ಮೈಸೂರು,ಜು.5:-  ಕೈಗಾರಿಕಾ ಕ್ಷೇತ್ರಕ್ಕೆ ನಿರೀಕ್ಷಿತ  ಮಟ್ಟದ  ಕೊಡುಗೆಯನ್ನೂ ಕೇಂದ್ರ ಸರ್ಕಾರದ ಬಜೆಟ್ ನೀಡಿಲ್ಲವಾದರೂ ಕೆಲವೊಂದು ಪ್ರೋತ್ಸಾಹ, ತೆರಿಗೆ ಕಡಿತ, ರಿಯಾಯಿತಿ, ವಿನಾಯಿತಿ ನೀಡಲಾಗಿದ್ದು ಸ್ವಾಗತಾರ್ಹ ವಾಗಿದೆ ಎಂದು ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷರಾದ ವಾಸು ಹಾಗೂ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ತಿಳಿಸಿದ್ದಾರೆ

ಈ ಕುರಿತು ಮಾಧ್ಯಮ ಹೇಲಿಕೆ ನೀಡಿರುವ ಅವರು ಮುದ್ರಾ ಸಾಲಾಯೋಜನೆ ಮಿತಿ ಒಂದು ಕೋಟಿ ರೂಪಾಯಿ ಗಳಿಗೆ ಹೆಚ್ಚಿಸಿ ರುವುದು ಸ್ವಾಗತಾರ್ಹ. ಆದರೆ ಹಾಲಿ ಇರುವ 50 ಲಕ್ಷ ರೂಪಾಯಿ ಮಿತಿ ಯೋಜನೆ ಸಾಲಗಾರರಿಗೆ ತಲಪುವಲ್ಲಿ ವಿಫಲ ವಾಗಿದೆ. ಬ್ಯಾಂಕ್  ಅಧಿಕಾರಿಗಳು ಹಾಲಿ ಸಾಲಗಾರ ರನ್ನೇ ಮುದ್ರಾ ಸಾಲಗಾರರು ಎಂದು ಹೇಳುತ್ತಿದ್ದಾರೆ.

ಹಾಲಿ ಮತ್ತು ಹೊಸ ಕೈಗಾರಿಕೆಗಳಿಗೆ 2% ಬಡ್ಡಿ ಯನ್ನೂ ಜಿ ಎಸ್ ಟಿ ನೋಂದಾಯಿತ ಸಣ್ಣಕೈಗಾರಿಕೆಗಳ ಖಾತೆ ಗೆ ಜಮಾ ಮಾಡುವ ಯೋಜನೆ. ವಿದ್ಯುತ್ ಆಧಾರಿತ ವಾಹನ ಗಳ ತೆರಿಗೆ 5% ಗೆ ಇಳಿಸಿ ,1.25 ಲಕ್ಷ ರೂಪಾಯಿ ವರೆಗೆ ಸಹಾಯಧನ ನೀಡ ಲಾಗುವುದು. ಮಹಿಳಾ ಉದ್ಯಮಿ ಗಳಿಗೆ ವಿಶೇಷ ಅನುದಾನ ನೀಡಲು ಅವಕಾಶ ನೀಡುವ ಯೋಜನೆ. ವಿಳಂಬ ಪಾವತಿ ಕಾಯ್ದೆ ಜಾರಿಗೆ ಬೆಂಬಲವಾಗಿ ವಿಶೇಷ ಪಾವಾತಿ ವೇದಿಕೆ ಸೃಷ್ಟಿ. 10 ಲಕ್ಷ ಯುವಜನ ಕೆ ಕೌಶಲ್ಯ ಅಭಿವೃದ್ಧಿ ತರಬೇತಿ. ಬಜೆಟ್ ಸ್ವಾಗತಾರ್ಹ ಅಂಶಗಳು. ಆದರೆ   ನಿರ್ಮಲ ಸೀತಾರಾಮ್ ರವರು  ರಾಜ್ಯದ ಪ್ರತಿನಿಧಿ ಯಾದರೂ ರಾಜ್ಯಕ್ಕಾಗಿ ವಿಶೇಷ ಯೋಜನೆ ಇಲ್ಲದಿರುವುದು ನಿರಾಶೆ ಮೂಡಿದೆ ಎಂದಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: