
ಮೈಸೂರು
ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ : ಬಾಂಗ್ಲಾದೇಶದ ಯುವತಿಯರು ಸೇರಿದಂತೆ 6ಮಂದಿ ರಕ್ಷಣೆ : ಮೂವರ ಬಂಧನ
ಮೈಸೂರು,ಜು.6:- ದಕ್ಷಿಣ ಗ್ರಾಮಾಂತರ ಠಾಣೆ ಪೊಲೀಸರು ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿ ಬಾಂಗ್ಲಾದೇಶದ ಇಬ್ಬರು ಯುವತಿಯರು ಸೇರಿದಂತೆ 6ಮಂದಿ ಯುವತಿಯರನ್ನು ರಕ್ಷಿಸಿ ಮೂವರು ಯುವಕರನ್ನು ಬಂಧಿಸಿರುವ ಘಟನೆ ಭುಗತಹಳ್ಳಿಯಲ್ಲಿ ನಡೆದಿದೆ.
ಬಂಧಿತರನ್ನು ವೇಶ್ಯಾವಾಟಿಕೆ ಯುವತಿಯರನ್ನು ಸರಬರಾಜು ಮಾಡುತ್ತಿದ್ದ ಮಹದೇವಸ್ವಾಮಿ, ಡ್ಯಾನಿಯಲ್ ಹಾಗೂ ಗುರು ಎಂದು ಗುರುತಿಸಲಾಗಿದೆ. ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ. ಬಂಧಿತ ಮೂವರು ಭುಗತಹಳ್ಳಿಯ ಬಳಿ ತೋಟದ ಮನೆಯೊಂದನ್ನು ಪಡೆದು ವೇಶ್ಯಾವಾಟಿಕೆ ನಡೆಸುತ್ತಿದ್ದರು ಎನ್ನಲಾಗಿದೆ. ಈ ಕುರಿತು ಖಚಿತ ಮಾಹಿತಿ ಪಡೆದ ದಕ್ಷಿಣ ಠಾಣೆಯ ಎಸ್ ಐ ಜಯಪ್ರಕಾಶ್ ಮತ್ತವರ ತಂಡ ನಿನ್ನೆ ಸಂಜೆ ದಾಳಿ ನಡೆಸಿದೆ. ಈ ಸಂದರ್ಭ ಸ್ಥಳದಲ್ಲಿದ್ದ ಇಬ್ಬರು ಬಾಂಗ್ಲಾ ಯುವತಿಯರು, ಓರ್ವ ಮುಂಬೈ ಯುವತಿ, ಮದ್ದೂರು, ಮಂಡ್ಯ, ಹಾಸನದ ಮೂವರು ಯುವತಿಯರನ್ನು ರಕ್ಷಿಸಿದ್ದಾರೆ.
ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. (ಕೆ.ಎಸ್,ಎಸ್.ಎಚ್)