ಮೈಸೂರು

ಆರ್ಗ್ಯಾನಿಕ್ ಕಂಪನಿಯೊಂದಕ್ಕೆ ಸೇರಿದ ಎಲೆಕ್ಟ್ರಿಕ್ ವಸ್ತುಗಳನ್ನು ಕದ್ದೊಯ್ದ ಕಳ್ಳರು

ಮೈಸೂರು,ಜು.6:-ಆರ್ಗ್ಯಾನಿಕ್ ಕಂಪನಿಯೊಂದಕ್ಕೆ ಸೇರಿದ ಎಲೆಕ್ಟ್ರಿಕ್  ವಸ್ತುಗಳನ್ನು ಕಳ್ಳರು ಕದ್ದೊಯ್ದ ಘಟನೆ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಕುರಿತು ಶಿವಕುಮಾರ್ ಎಂಬವರು ದೂರು ದಾಖಲಿಸಿದ್ದು, ಮೈಸೂರು –ಬೆಂಗಳೂರು  ಹೈವೆ ಯಲ್ಲಿರುವ  ನಾಗನಹಳ್ಳಿ  ಗೇಟ್ ಬಳಿ  ಷಷ್ಠಿ ದೇವಸ್ಥಾನದ ಪಕ್ಕದ  ತಮ್ಮ ಜಾಗದಲ್ಲಿ  ಹೊಸದಾಗಿ ಆರ್ಗ್ಯಾನಿಕ್  ಔಟ್ ಲೆಟ್  ಮತ್ತು   ಹೋಟೆಲ್ ನ್ನು  ನಿರ್ಮಿಸುತ್ತಿದ್ದು, ಈ ಕಾಮಗಾರಿಗಾಗಿ  ಎಲೆಕ್ಟ್ರಿಕಲ್  ಸ್ವಿಚ್ ಗಳು ,ಎಂ,ಸಿ,ಬಿ ಸ್ವಿಚ್ ಗಳು, ವೈರ್ ಗಳು, ಟ್ಯೂಬ್ ಲೈಟ್ ಗಳನ್ನು  ತರಿಸಲಾಗಿತ್ತು. ಕೆಲಸಕ್ಕೆ ಬಳಕೆಯಾಗಿ  ಉಳಿದಿದ್ದ   ಪದಾರ್ಥಗಳನ್ನು  ಕಂಟೈನರ್  ನಲ್ಲಿಯೇ ಇಡಲಾಗಿತ್ತು. ನಂತರ 04/07/2019 ರಂದು ಬಂದು ನೋಡಲಾಗಿ  ಕಂಟೈನರ್ ಗಳ ಬಾಗಿಲಿಗೆ ಹಾಕಿದ್ದ ಬೀಗಗಳನ್ನು ಮುರಿದು,ಅಲ್ಲಿದ್ದ  ಎಲೆಕ್ಟ್ರಿಕಲ್ ಪದಾರ್ಥಗಳು ಹಾಗೂ R & T  ಎಂಜಿನಿಯರಿಂಗ್   ಕಂಪನಿಯವರಿಗೆ ಸೇರಿದ  ಸ್ಟೀಲ್ ಪೈಪ್ ಹಾಗೂ  ಇತರೆ ಪದಾರ್ಥಗಳನ್ನು  ಕಳ್ಳರು ಕದ್ದೊಯ್ದಿದ್ದಾರೆ ಎಮದು ದೂರಿನಲ್ಲಿ ತಿಳಿಸಿದ್ದಾರೆ.

ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: