ದೇಶ

ಫ್ರಾನ್ಸ್`ನಿಂದ 36 ರಾಫೆಲ್ ಯುದ್ಧವಿಮಾನ ಖರೀದಿಗೆ ಭಾರತ ಸಹಿ: ವಿಮಾನಗಳು ಕೈ ಸೇರಲು ಬೇಕು 36 ತಿಂಗಳ ಸಮಯ

ನವದೆಹಲಿ: ಫ್ರಾನ್ಸ್`ನಿಂದ ಅಂದಾಜು 59 ಸಾವಿರ ಕೋಟಿ ಮೌಲ್ಯದ 36 ರಾಫೆಲ್ ಸಮರ ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಭಾರತ-ಫ್ರಾನ್ಸ್  ಸಹಿ ಮಾಡಿವೆ.

ಭಾರತದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಮತ್ತು ಫ್ರಾನ್ಸ್ ರಕ್ಷಣಾ ಸಚಿವ ಜೀನ್ ಯೆಸ್ ಲೆ ಡ್ರಿಯಾನ್ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. ಭಾರತವು 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲಿದೆ ಎಂದು ಫ್ರಾನ್ಸ್ ಗೆ ಪ್ರವಾಸಕ್ಕೆ ತೆರಳಿದ್ದ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ 16 ತಿಂಗಳ ಬಳಿಕ ಈಗ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ವ್ಯವಹಾರದ ಒಪ್ಪಂದಕ್ಕೂ ಇಂದು ಸಹಿ ಹಾಕಲಾಗಿದೆ. ಒಂದು ಆಸನದ ಯುದ್ಧವಿಮಾನವೊಂದಕ್ಕೆ 91 ಮಿಲಿಯನ್ ಯುರೋ ಮತ್ತು ಎರಡು ಆಸನದ ಯುದ್ಧವಿಮಾನಕ್ಕೆ 94 ಮಿಲಿಯನ್ ಯುರೋ ಖರ್ಚು ಬೀಳಲಿದೆ.

rafel-jetಶಸ್ತ್ರಾಸ್ತ್ರ, ಐದು ವರ್ಷಗಳ ಬಿಡಿಭಾಗಗಳ ಸಂಪೂರ್ಣ ನಿರ್ವಹಣೆ, ಉತ್ತಮ ಕಾರ್ಯಕ್ಷಮತೆ ಆಧರಿಸಿದ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ನಾವು ಸಹಿ ಹಾಕಿದ್ದೇವೆ ಎಂದು ತಿಳಿಸಲು ನಾವು ಬಹು ಸಂತೋಷಪಡುತ್ತಿದ್ದೇವೆ. ಇದು ಐಎಎಫ್ ಸಾಮರ್ಥ್ಯ ಹೆಚ್ಚಿಸಲಿದೆ ಎಂದು ಸಚಿವ ಪರಿಕ್ಕರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಯುಪಿಎ ಸರಕಾರದ ಅವಧಿಯಲ್ಲಿ ಮಾಡಿಕೊಳ್ಳಲಾಗಿದ್ದ ಒಪ್ಪಂದವನ್ನು ಮೋದಿ ಸರಕಾರ ರದ್ದುಗೊಳಿಸಿ ಹೊಸ ಒಪ್ಪಂದವನ್ನು ರಚಿಸಿದ್ದು, ಇದರಿಂದಾಗಿ ಭಾರತಕ್ಕೆ 750 ಮಿಲಿಯನ್ ಯುರೋ ಹಣ ಉಳಿತಾಯವಾಗಿದೆ.

ಒಪ್ಪಂದಕ್ಕೆ ಸಹಿ ಹಾಕಿದ ದಿನದಿಂದ 36 ತಿಂಗಳ ಬಳಿಕ ರಫೇಲ್ ಜೆಟ್ ಭಾರತದ ಕೈ ಸೇರಲಿದ್ದು, 66 ತಿಂಗಳೊಳಗೆ ಎಲ್ಲ ಜೆಟ್ ಗಳು ಕೈಸೇರಲಿವೆ.

ಮಿಟಿಯೋರ್ ಮತ್ತು ಸ್ಕಾಲ್ಪ್ ಕ್ಷಿಪಣಿ ಸಜ್ಜಿತ

ಯುದ್ಧವಿಮಾನಗಳು ಗಾಳಿಯಲ್ಲೇ ಪರಸ್ಪರ ಸಮರಕ್ಕಿಳಿದಾಗ ಮಿಟಿಯೋರ್ ಕ್ಷಿಪಣಿಸಜ್ಜಿತ ರಾಫೇಲ್ ಯುದ್ಧ ವಿಮಾನಗಳ ಸಹಾಯದಿಂದ 150 ಕಿಲೋಮೀಟರ್್ಗಳಿಗೂ ಹೆಚ್ಚು ದೂರಿಂದಲೇ ಎದುರಾಳಿ ವಿಮಾನಗಳನ್ನು ಹೊಡೆದುರುಳಿಸಬಹುದಾಗಿದೆ. ಮತ್ತು ಸ್ಕಾಲ್ಪ್ ಕ್ಷಿಪಣಿ ಸಜ್ಜಿತ ವಿಮಾನಗಳಿಂದ 750 ರಿಂದ ಒಂದು ಸಾವಿರ ಕಿಲೋಮೀಟರ್ ದೂರದಿಂದಲೇ ಎದುರಾಳಿ ವಿಮಾನಗಳಿಗೆ ಗುರಿ ಇಡುವ ಸಾಮರ್ಥ್ಯ ಇದೆ.

ರಷ್ಯಾ ನಿರ್ಮಿತ ಸುಖೋಯ್-30 ಯುದ್ಧ ವಿಮಾನಗಳಿಂದ 400-450 ಕಿ.ಮೀ.ಗಳ ವರೆಗಷ್ಟೇ ಗುರಿ ಇಡಬಹುದಾಗಿದೆ.

ರಕ್ಷಣಾ ಇಲಾಖೆಯ ಮೂಲಗಳ ಪ್ರಕಾರ, ಫ್ರಾನ್ಸ್ ಈಗ ಬಳಸುತ್ತಿರುವ ರಾಫೆಲ್ ಯುದ್ಧವಿಮಾನಗಳಿಂಗಿಂತಲೂ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿ ಭಾತಕ್ಕಾಗಿ ತಯಾರಿಸಲಾಗುತ್ತಿರುವ ಈ ಹೊಸ ರಾಫೆಲ್ ಯುದ್ಧ ವಿಮಾನಗಳಲ್ಲಿ ಅನೇಕ ವಿಶೇಷ ಅಂಶಗಳನ್ನು ಸೇರಿಸಲಾಗಿದೆ.

ಪ್ರಸ್ತುತ ಪಾಕಿಸ್ತಾನ ವಾಯುಪಡೆಯು 80 ಕಿಮೀ ವರೆಗೆಗಿನ ಗುರಿ ತಲುಪುವ ಕ್ಷಿಪಣಿ ಹಾರಿಸಬಲ್ಲ ಯುದ್ಧ ವಿಮಾನಗಳನ್ನು ಮಾತ್ರ ಹೊಂದಿದೆ. ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತ 50 ಕಿಮೀ ಸಾಗುವ ಸಾಮರ್ಥ್ಯದ ಕ್ಷಿಪಣಿ ಹೊಂದಿತ್ತು. ಪಾಕಿಸ್ತಾದ ಬಳಿ ಈ ರೀತಿಯ ದಾಳಿ ವ್ಯವಸ್ಥೆ ಇರಲಿಲ್ಲ. ನಂತರ ಅದು 80 ಕಿಮೀ ಸಾಮರ್ಥ್ಯದ ದಾಳಿ ವ್ಯವಸ್ಥೆ ಖರೀದಿಸಿತ್ತು.

Leave a Reply

comments

Related Articles

error: