ಮೈಸೂರು

ಅಕ್ರಮ ಮಳಿಗೆ ತೆರವು : ಜಿಲ್ಲಾಡಳಿತದ ಕ್ರಮಕ್ಕೆ ಅಭಿನಂದನೆ

ಬೋಗಾದಿ ರಿಂಗ್ ರಸ್ತೆಯ ವೃತ್ತದಲ್ಲಿ ಅಕ್ರಮವಾಗಿ ಕಟ್ಟಿದ್ದ ಮಳಿಗೆಗಳನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಳೆದ ಹಲವು ದಿನಗಳ ಕಾಲ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನಡೆಸಿದ ಧರಣಿಗೆ ಎಚ್ಚೆತ್ತಾ ಜಿಲ್ಲಾಡಳಿತವು ಅಕ್ರಮ ಮಳಿಗೆಗಳನ್ನು ತೆರವುಗೊಳಿಸಿದೆ.

ಮಹಿಳೆಯರಿಗೆ, ನಿರ್ಗತಿಕರಿಗೆ ಹಾಗೂ ಇತರೆ ಬಡವರಿಗೆ ಮಂಜೂರಾಗುವ ಭೂಮಿಯನ್ನು ರಿಯಲ್ ಏಸ್ಟೇಟ್‍ ದಂಧೆಕೋರರು ದೌರ್ಜನ್ಯದಿಂದ ಅಕ್ರಮಿಸುತ್ತಿದ್ದು ಇದಕ್ಕೆ ಕೆಲವು ಸರ್ಕಾರಿ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಧರಣಿ ನಡೆಸಲಾಗಿತ್ತು ಹೋರಾಟದ ಫಲವಾಗಿ ತೆರವು ಕಾರ್ಯಾಚರಣೆ ನಡೆಸಿದ್ದು ಭೂಗಳ್ಳರಿಗೆ ತಕ್ಕ ಪಾಠ ಕಲಿಸಿದ ಜಿಲ್ಲಾಡಳಿತದ ಕ್ರಮ್ಕಕೆ ಅಭಿನಂದಿಸಿ, ದಲಿತ ಮಹಿಳೆ ಶಿವಮ್ಮಗೆ ಜಾಗವನ್ನು ಖಾತೆ ಮಾಡಿಕೊಡಬೇಕೆಂದು ಸಮಿತಿಯ ಜಿಲ್ಲಾ ಸಂಚಾಲಕ ರಾಜಶೇಖರ ಕೋಟೆ, ವಿಭಾಗೀಯ ಸಂಚಾಲಕ ದೇವಗಳ್ಳಿ ಸೋಮಶೇಖರ ಹಾಗೂ ಇತರರು ಒತ್ತಾಯಿಸಿದ್ದಾರೆ.

Leave a Reply

comments

Related Articles

error: